

ದಾವಣಗೆರೆ : ನೌಕರರ ಪಿಂಚಣಿ ಯೋಜನೆಯಲ್ಲಿನ (ಇಪಿಎಸ್-95) ಕೆಲವು ನ್ಯೂನತೆ ಸರಿಪಡಿಸಲು ನೌಕರರ ಪಿಂಚಣಿ ಯೋಜನೆ ರಾಷ್ಟ್ರೀಯ ಹೋರಾಟ ಸಮಿತಿ ಪದಾಧಿಕಾರಿಗಳು ಬುಧವಾರ ನಗರದ ಸಂಸದರ ಜನಸಂಪರ್ಕ ಕಚೇರಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಮನವಿ ಸಲ್ಲಿಸಿದರು.
ದೇಶದಲ್ಲಿ ಸುಮಾರು 75 ಲಕ್ಷ ಇಪಿಎಸ್-95 ಯೋಜನೆ ಪಿಂಚಣಿದಾರರಿದ್ದು , ಕಳೆದ 7 ವರ್ಷಗಳಿಂದ ಅತ್ಯಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದೇವೆ. ಇದನ್ನು ಸರಿಪಡಿಸುವಂತೆ ಕೋರಿದರು. ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಹಾಗೂ ಹಣಕಾಸು ಸಚಿವರಿಗೆ ಪತ್ರ ಬರೆಯುವುದಾಗಿ ಸಂಸದರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕುಂಬಳೂರು, ಕೆಂಚಿಕೊಪ್ಪ, ಗುಡ್ಡೇಹಳ್ಳಿ, ಈರಗನಹಳ್ಳಿ, ಹುಚ್ಚವ್ವನಹಳ್ಳಿ, ತೆಲಿಗಿ, ಸೇರಿ ಅನೇಕ ಗ್ರಾಮಗಳ ಸಾರ್ವಜನಿಕರು ಸಂಸದರಿಗೆ ವಿವಿಧ ವಿಷಯಗಳ ಕುರಿತು ಮನವಿ ಸಲ್ಲಿಸಿದರು.