

ದಾವಣಗೆರೆ : ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಸಿ. ಲಿಂಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆಯಲ್ಲಿ ಕಾರ್ಯದರ್ಶಿಯಾಗಿ ಎಸ್. ರವಿಕುಮಾರ್, ಖಜಾಂಚಿಯಾಗಿ ಜೆ.ಪಿ. ಯೋಗಾನಂದ ಸ್ವಾಮಿ, ಉಪಾಧ್ಯಕ್ಷರಾಗಿ ಎಂ. ಪ್ರಕಾಶ್ (ಹರಿಹರ), ಪಿ.ಬಿ. ಶೈಲೇಶ್ (ಹೊನ್ನಾಳಿ), ಕೆ.ಎಂ. ಮಂಜುನಾಥ (ಜಗಳೂರು), ಎಂ.ಎನ್. ಪ್ರಕಾಶ್ (ಚನ್ನಗಿರಿ), ಜಂಟಿ ಕಾರ್ಯದರ್ಶಿಯಾಗಿ ಬಿ.ಒ. ಮಲ್ಲಿಕಾರ್ಜುನ್, ಬಸವಾರಾಧ್ಯ (ಚನ್ನಗಿರಿ) ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಜೆ.ಎಸ್. ಲೋಕೇಶ್ ಆಯ್ಕೆಯಾದವರು.