45 ವಾರ್ಡ್‌ವಾರು ಸ್ವಚ್ಛತಾ ಅಭಿಯಾನ

dvg mayor july 12
Published on

ದಾವಣಗೆರೆ: ನಗರದ ಸ್ವಚ್ಛತೆ ಮತ್ತು ಉತ್ತಮ ಪರಿಸರಕ್ಕಾಗಿ ಪಾಲಿಕೆ ವ್ಯಾಪ್ತಿಯ ಎಲ್ಲ 45 ವಾರ್ಡ್‌ಗಳಲ್ಲಿ ಪರಿಸರ ಸೈನಿಕರನ್ನು ನಿಯೋಜಿಸಿ, ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುವುದೆಂದು ಮೇಯರ್ ಬಿ.ಜಿ.ಅಜಯ್‌ಕುಮಾರ್ ಹೇಳಿದರು.

ಇತ್ತೀಚೆಗೆ, ನಗರದ ದೇವರಾಜ್ ಅರಸ್ ಬಡಾವಣೆಯ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಜತೆಗೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸೈನಿಕರಾಗಿ ಪರಿಸರ ಪ್ರಿಯರು, ಹಿರಿಯ ನಾಗರಿಕರು, ಯುವಕರು, ಸ್ಥಳೀಯ ನಾಗರಿಕರ ಸಮಿತಿ, ಸಂಘ ಸಂಸ್ಥೆಗಳು ಮತ್ತು ಆಯಾ ವಾರ್ಡಿನ ಪಾಲಿಕೆ ಸದಸ್ಯರು ಪ್ರತಿ ಶನಿವಾರ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಪಾಲಿಕೆ ಸದಸ್ಯರಾದ ವಿನಾಯಕ ಪೈಲ್ವಾನ್, ಗಾಯತ್ರಿಬಾಯಿ ಖಂಡೋಜಿರಾವ್, ಎಚ್.ಸಿ.ಜಯಮ್ಮ, ಶಿವನಗೌಡ ಪಾಟೀಲ್, ಸ್ಥಳೀಯರಾದ ಗೋಪಾಲ್‌ರಾವ್, ಚೇತನಾ ಶಿವಕುಮಾರ್, ಅಧಿಕಾರಿಗಳು ಮತ್ತು ಪೌರ ಕಾರ್ಮಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net