ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳ ಹಿತ ಕಾಪಾಡಲು ಮನವಿ

dvg-Kabbur-21.jpg
Published on

ದಾವಣಗೆರೆ : ಒಬಿಸಿ ಮಾಲೀಕತ್ವದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಹಿತ ಕಾಪಾಡುವಂತೆ ಕರ್ನಾಟಕ ಒಬಿಸಿ ಮಾನ್ಯತೆ ಪಡೆದ ಸಂಪಾದಕರ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಈ ಕುರಿತು ಮನವಿ ಸಲ್ಲಿಸಿದರು.

ಕೋವಿಡ್ ನಂತರ ಈಗಷ್ಟೇ ಪತ್ರಿಕೆಗಳು ಚೇತರಿಸಿಕೊಳ್ಳುತ್ತಿದ್ದು, ಜಾಹೀರಾತು ನೀತಿ ಪರಿಷ್ಕರಣೆ ಹಾಗೂ ಜಾರಿಯನ್ನು ಲೋಕಸಭೆ ಚುನಾವಣೆ ಮುಗಿಯುವ ವರೆಗೂ ತಡೆ ಹಿಡಿಯಬೇಕು. ಆ ನೀತಿ ಅಂತಿಮಗೊಳಿಸುವ ಪೂರ್ವದಲ್ಲಿ ಸಂಪಾದಕರ ಸಂಘದ ಪದಾಧಿಕಾರಿಗಳ ಜತೆ ಪೂರ್ವಾಪರ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸಲ್ಲಿಸುವ ವಾರ್ಷಿಕ ವರದಿಗಳನ್ನು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ವಾರ್ತಾ ಇಲಾಖೆ ಮೂಲಕ ಸಲ್ಲಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
 ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಕಬ್ಬೂರು, ಗೌರವಾಧ್ಯಕ್ಷ ಮತ್ತೀಕೆರೆ ಜಯರಾಮು, ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಎಂ.ಎಸ್, ಕಾರ್ಯಾಧ್ಯಕ್ಷ ರಾಜು ನದಾಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net