ಅಂತರ ಕಾಲೇಜು ಮ್ಯಾನೇಜ್‌ಮೆಂಟ್ ಫೆಸ್ಟ್

dvg-jain-college_20250531005715893.jpg
Published on

ದಾವಣಗೆರೆ :  ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದಿಂದ ಬುಧವಾರ, ಪದವಿ ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ಮ್ಯಾನೇಜ್‌ಮೆಂಟ್ ಫೆಸ್ಟ್ ‘ಇನ್‌ಫ್ಯೂಷನ್ 2025’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ ವಿವಿಧ ಪದವಿ ಕಾಲೇಜುಗಳಿಂದ 14 ತಂಡಗಳು ವ್ಯಾಪಾರ, ರಸಪ್ರಶ್ನೆ, ಅತ್ಯುತಮ ಮಾರಾಟಗಾರ ಹಾಗು ತಂಡದ ಗುರಿಗಳು ಎಂಬ ಸುತ್ತುಗಳಲ್ಲಿ ಭಾಗವಹಿಸಿದ್ದವು ಎಂದು ವಿಭಾಗದ ಮುಖ್ಯಸ್ಥ ಡಾ. ಡಿ. ಸುಹಾಸ್ ಹಾಗೂ ಪ್ರಾಚಾರ್ಯ ಮತ್ತು ನಿರ್ದೇಶಕ ಡಾ. ಡಿ.ಬಿ. ಗಣೇಶ್ ತಿಳಿಸಿದರು. ಸಲಹೆಗಾರ ಡಾ. ಮಂಜಪ್ಪ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net