ಎಸ್.ಎಸ್. ಮಲ್ಲಿಕಾರ್ಜುನ್ ಗೆ ಡಿಸಿಎಂ ಪಟ್ಟ ನೀಡಡಲು ಆಗ್ರಹ

IMG-20230517-WA0036.jpg
Published on

ದಾವಣಗೆರೆ : ಮಾಜಿ ಸಚಿವ ó ಅವರಿಗೆ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಭಾರತ್ ಸೌಹಾರ್ದ ಸಂಘದ ಕಾರ್ಯದರ್ಶಿ ಎನ್.ಎಂ.ಆಂಜನೇಯ ಗುರೂಜಿ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾಗಿರುವ ಎಸ್ಸೆಸ್ಸೆಂ ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ್ ಅವರಿಗೆ ಡಿಸಿಎಂ ಆಗಿ ನೇಮಿಸಬೇಕು ಎಂದು ಹೇಳಿದರು.
ಅಧ್ಯಕ್ಷ ಬುತ್ತಿ ಹುಸೇನ್ ಪೀರ್, ಮೆಹಬೂಬ್ ಶೇಖ್, ನವೀದ್ ಅಹ್ಮದ್, ಆದಿಲ್ ಬಾಷಾ, ಜಮೀಉಲ್ಲಾ, ತಾಹೀರ್ ಹುಸೇನ್, ಸಾದಿಕ್, ಕಾಯಿಪೇಟೆ ಹಾಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net