ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಶಾಮನೂರು ನಾಮಪತ್ರ

dvg-shamanuru.jpg
Published on

ದಾವಣಗೆರೆ : ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಬೆಂಗಳೂರಿನ ಸದಾಶಿವ ನಗರದ ವೀರಶೈವ-ಲಿಂಗಾಯತ ಭವನದಲ್ಲಿ ಗುರುವಾರ, ಮಹಾಸಭೆಯ ಮುಖ್ಯ ಚುನಾವಣಾಧಿಕಾರಿ ಎಂ.ಬಿ. ದ್ಯಾಬೇರಿ ಅವರಿಗೆ ನಾಮಪತ್ರ ಸಲ್ಲಿಸಿದರು.  ರಾಜ್ಯ ಘಟಕದ ನೂತನ ಅಧ್ಯಕ್ಷ ಶಂಕರ ಬಿದರಿ, ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಎಸ್. ವೀರಣ್ಣ, ಎಂ.ಎನ್. ರಾಜಶೇಖರಪ್ಪ (ಅಣಬೇರು ರಾಜಣ್ಣ), ಬಿ.ಎಸ್. ಸಚ್ಚಿದಾನಂದ ಮೂರ್ತಿ, ಎಚ್.ಎಂ. ರೇಣುಕ ಪ್ರಸನ್ನ, ಚಿದಾನಂದ ಎಸ್. ಮಠದ, ಕೋರಿ ವಿರೂಪಾಕ್ಷಪ್ಪ, ಗಂಗಮ್ಮ ಬಸವರಾಜು, ಚಂದ್ರಕಲಾ ಶ್ರೀಕಂಠಾರಾಧ್ಯ, ರೂಪಶೇಖರ ಮತ್ತು ಸಮಿತಿಯ ಇನ್ನಿತರ ಸದಸ್ಯರು, ಸೂಚಕರು, ಅನುಮೋದಕರು ಇದ್ದರು.  ನಾಮಪತ್ರ ಸಲ್ಲಿಸಲು ಸೆ. 11 ಕೊನೆಯ ದಿನವಾಗಿದೆ. 12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 15 ರಂದು ಉಮೇದುವಾರಿಕೆ ಹಿಂಪಡೆಯಲು ಅವಕಾಶವಿರುತ್ತದೆ. ಅಗತ್ಯವಿದ್ದಲ್ಲಿ ಸೆ. 29 ರಂದು ಚುನಾವಣೆ ನಡೆಯಲಿದೆ ಎಂದು ಉಪ ಚುನಾವಣಾಧಿಕಾರಿ ಸಿ.ಎಸ್. ವೀರೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net