ಸಮಾಜಮುಖಿ ಚಿಂತನೆಯ ಮಹಾದಾನಿ

mahasabha.jpg
Published on

ದಾವಣಗೆರೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಥಮ ಅಧ್ಯಕ್ಷರಾಗಿದ್ದ ಶಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ಮಹಾಸಭಾ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
 ನಗರದ ಎಂಬಿಎ ಕಾಲೇಜು ಆವರಣದ ಕಚೇರಿಯಲ್ಲಿ ಬುಧವಾರ, ಶಿರಸಂಗಿ ಲಿಂಗರಾಜ ದೇಸಾಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಶಿರಸಂಗಿ ಲಿಂಗರಾಜ ಅವರದು ಶ್ರೀಮಂತ ಮನೆತನವಾಗಿದ್ದು ಆಸ್ತಿವಂತರಾಗಿದ್ದರು. ಅವರು ತಮ್ಮ ಸಂಪೂರ್ಣ ಆಸ್ತಿಯನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದರು. ವಿಶೇಷವಾಗಿ ಮಕ್ಕಳ ವಿದ್ಯಾರ್ಜನೆಗೆ ಆದ್ಯತೆ ನೀಡಿದರು ಎಂದು ಅವರ ತ್ಯಾಗವನ್ನು ಸ್ಮರಿಸಿದರು. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
 ಮಹಾಸಭಾ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಎಸ್. ಗಣೇಶ್, ಕಾರ್ಯದರ್ಶಿ ಎಚ್.ಎಂ. ರೇಣುಕ ಪ್ರಸನ್ನ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್, ಮುಖಂಡರಾದ ಬಿ.ಜೆ. ರಮೇಶ್, ಕರೆಶಿವಪ್ಳ ಸಿದ್ದೇಶ್, ದೇವರಾಜ್, ಅಜ್ಜಂಪುರ ವಿಜಯ ಕುಮಾರ್, ಯಶೋದಾ, ಸೌಮ್ಯಾ, ವಿಜಯಾ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net