ರಾಷ್ಟ್ರೀಯ ಲೋಕ ಅದಾಲತ್‌

court.jpg
Published on

ದಾವಣಗೆರೆ : ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 9,796 ಪ್ರಕರಣಗಳಲ್ಲಿ 3,590 ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹ 16.52 ಕೋಟಿ ಪರಿಹಾರ ಕೊಡಿಸಲಾಯಿತು.
1,30,858 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 66.12 ಕೋಟಿ ಪರಿಹಾರ ಕೊಡಿಸಲಾಯಿತು.
ಅಪರಾಧ, ಕೌಟುಂಬಿಕ, ಬ್ಯಾಂಕ್‌, ಕಾರ್ಮಿಕ ವ್ಯಾಜ್ಯ ಹಾಗೂ ಹಣ ವಸೂಲಾತಿ ಸೇರಿದಂತೆ ಹಲವು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಬಾಕಿ ಇದ್ದ 387 ಅಪರಾಧ ಪ್ರಕರಣಗಳಲ್ಲಿ 164 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 71,500 ಪರಿಹಾರ ಕೊಡಿಸಲಾಯಿತು. ಬ್ಯಾಂಕ್‌ ಸಾಲದ ಸಂಬಂಧಿತ 178 ಪ್ರಕರಣಗಳಲ್ಲಿ 24 ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 97.62 ಲಕ್ಷ ಪರಿಹಾರ ಕೊಡಿಸಲಾಯಿತು. ಹಣ ವಸೂಲಾತಿಯ 214 ಪ್ರಕರಣಗಳಲ್ಲಿ 20 ಇತ್ಯರ್ಥಪಡಿಸಿ ₹ 37.86 ಲಕ್ಷ ಪರಿಹಾರ, ಕಾರ್ಮಿಕ ವ್ಯಾಜ್ಯದ 4 ಪ್ರಕರಣಗಳಲ್ಲಿ ಒಂದನ್ನು ಇತ್ಯರ್ಥಪಡಿಸಿ ₹ 46 ಸಾವಿರ ಪರಿಹಾರ ಕೊಡಿಸಲಾಯಿತು.
ವಿದ್ಯುತ್‌ ಕಾಯ್ದೆ ಸಂಬಂಧಿತ 259 ಪ್ರಕರಣಗಳಲ್ಲಿ ಎಲ್ಲವನ್ನೂ ಇತ್ಯರ್ಥಪಡಿಸಿ ₹ 46.62 ಲಕ್ಷ ಪರಿಹಾರ ಕೊಡಿಸಿರುವುದು ಅದಾಲತ್‌ನ ವಿಶೇಷ.
66 ಕೌಟುಂಬಿಕ ಪ್ರಕರಣಗಳಲ್ಲಿ 7 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಭೂ ವ್ಯಾಜ್ಯದ 14 ಪ್ರಕರಣಗಳಲ್ಲಿ ಒಂದನ್ನು ಇತ್ಯರ್ಥಪಡಿಸಿ ₹ 7.34 ಲಕ್ಷ ಪರಿಹಾರ, ವಾಣಿಜ್ಯ, ಆಸ್ತಿ ವಿಭಾಗ ಸೇರಿದಂತೆ 2,993 ಸಿವಿಲ್‌ ಪ್ರಕರಣಗಳಲ್ಲಿ 241 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹ 3.80 ಕೋಟಿ ಪರಿಹಾರ ಕೊಡಿಸಲಾಯಿತು.
ಅಪರಾಧ ಹಾಗೂ ಇತರೆ ಸೇರಿದಂತೆ 3,909 ಪ್ರಕರಣಗಳಲ್ಲಿ 2,903 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹16. 97 ಲಕ್ಷ ಪರಿಹಾರ ಕೊಡಿಸಲಾಯಿತು.
ಹಣ ವಸೂಲಾತಿ, ಬ್ಯಾಂಕ್‌ ಸಂಬಂಧಿ, ಕಾರ್ಮಿಕ ವಾಜ್ಯ, ಕಂದಾಯ ಸೇರಿದಂತೆ ವಿವಿಧ ವಿಭಾಗಗಳ 1,30,858 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹ 66.12 ಕೋಟಿ ಪರಿಹಾರ ಕೊಡಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್‌.ಎಚ್‌. ಅರುಣ್‌ಕುಮಾರ್‌, ಕಾರ್ಯದರ್ಶಿ ಎಸ್‌. ಬಸವರಾಜ್‌, ವಕೀಲರಾದ ಆಂಜನೇಯ ಗುರೂಜಿ, ಅರುಣ್‌ ಕೌಜಲಗಿ, ಸುಜಾತಾ, ನೀಲಕಂಠಯ್ಯ, ಎ.ಎಚ್‌. ಮಂಜುನಾಥ್‌, ಜೆ.ಕೆ. ಬಸವರಾಜ್‌, ಸಂತೋಷಕುಮಾರ್‌, ಶ್ರೀಲಕ್ಷ್ಮಿ ಎಂ., ಅಜಯ್‌ ಆವರಗೆರೆ, ಮಧುರಾ ಹಾಗೂ ಕಾನೂನು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net