ಮೋಟರು ವಾಹನ ಕಾಯ್ದೆ ಉಲ್ಲಂಘನೆ, 294 ಕೇಸ್ ದಾಖಲು

dvg lockdown july 19-3
Published on

ದಾವಣಗೆರೆ: ಭಾನುವಾರ, ಜಿಲ್ಲೆಯಲ್ಲಿ ಒಟ್ಟು 294 ಪ್ರಕರಣ ದಾಖಲಾಗಿದ್ದು 81,500 ರೂ. ದಂಡ ಸಂಗ್ರಹವಾಗಿದೆ. ಮಾಸ್ಕ್ ಧರಿಸದ 182 ಪ್ರಕರಣಗಳಿಂದ 33 ಸಾವಿರ ರೂ., ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ 112 ಕೇಸ್‌ಗಳಿಂದ 48,500 ರೂ. ದಂಡ ವಸೂಲಾಗಿದೆ.

ದಾವಣಗೆರೆ ನಗರ ಉಪ ವಿಭಾಗ ವ್ಯಾಪ್ತಿಯಲ್ಲಿ 249, ಗ್ರಾಮಾಂತರ ಉಪ ವಿಭಾಗದಲ್ಲಿ 27, ಚನ್ನಗಿರಿ ಉಪ ವಿಭಾಗದಲ್ಲಿ 18 ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net