ಬಿವಿವೀ ಕನ್ನಡ ವಿವೇಕದ ಪ್ರತಿನಿಧಿ

dvg-gosthi.jpg
Published on

ದಾವಣಗೆರೆ : ಪ್ರೊ. ಬಿ.ವಿ. ವೀರಭದ್ರಪ್ಪ ಕನ್ನಡ ವಿವೇಕದ ಪ್ರತಿನಿಧಿ ಎಂದು ಪ್ರಾಧ್ಯಾಪಕಿ ಡಾ. ಎಂ.ಎಸ್. ಆಶಾದೇವಿ ಹೇಳಿದರು.  ಸಾಹಿತ್ಯ ಸಂವಾದದ ಅಂಗವಾಗಿ ನಡೆದ ‘ಧರ್ಮ ಮತ್ತು ವೈಚಾರಿಕತೆ’ ಕುರಿತ ಗೋಷ್ಠಿಯಲ್ಲಿ ಮಾತನಾಡಿ, ವೀರಭದ್ರಪ್ಪ ಅವರು 80 ರ ದಶಕದಲ್ಲಿ ‘ವೇದಾಂತ ರೆಜಿಮೆಂಟ್’ ಮೂಲಕ ವೇದಗಳ ಮರುಚಿಂತನೆ ಆರಂಭಿಸಿದ್ದು ಐತಿಹಾಸಿಕ ಎಂದು ಬಣ್ಣಿಸಿದರು.  ಇವತ್ತಿನ ಸಂದರ್ಭದ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕಲು ಬೇಕಾಗಿರುವ ತಾತ್ವಿಕ ಆವರಣವನ್ನು ಬಿವಿವೀ ವರ ಬರವಣಿಗೆ ನೀಡುತ್ತದೆ ಎಂದು ತಿಳಿಸಿದರು.  ಎಲ್ಲ ಕಾಲದಲ್ಲೂ ಯುವ ಜನಾಂಗಕ್ಕೆ ಆಯ್ಕೆಯ ಗೊಂದಲಗಳು ಎದುರಾಗುತ್ತವೆ. ಈ ದ್ವಂದ್ವಗಳು ಇಂದಿನಷ್ಟು ತೀವ್ರವಾಗಿರಲಿಲ್ಲ. ಐಟಿ-ಬಿಟಿ ಉದ್ಯೋಗಿಗಳು ಸೇರಿ ಈ ತಲೆಮಾರು ಭಾರತವನ್ನು ಸಾಂಸ್ಕೃತಿಕವಾಗಿ ಮುಗಿಸಿ ಬಿಡಬಹುದಾದ ಬೆಳವಣಿಗೆಗಳ ಭಾಗವಾಗಿರುವುದು ವಿಪರ್ಯಾಸ ಎಂದರು.  ವೀರಭದ್ರಪ್ಪ ಅವರ ತಾತ್ವಿಕತೆ ವಚನಕಾರರ ವೈಚಾರಿಕ ಪ್ರಜ್ಞೆಯಿಂದ ರೂಪುಗೊಂಡಿದೆ. ಧರ್ಮ ಬೇಕು, ಅದು ನೈತಿಕ ಪ್ರಜ್ಞೆ ಕೊಡುವಂತಿರಬೇಕು. ಎಲ್ಲರಿಗೂ ಲೇಸು ಬಯಸುವ, ಸಮಾನತೆಯ ಒಳಗಣ್ಣು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.  ಶೇ. 33 ರಷ್ಟು ಮಹಿಳಾ ಮೀಸಲಾತಿಯು ಚುನಾವಣಾ ಗಿಮಿಕ್ ಆಗಿದೆ. ಅದು ಯಾವಾಗ ಜಾರಿಗೆ ಬರುವುದೋ ಗೊತ್ತಿಲ್ಲ ಎಂದರು. ಹಿರಿಯ ಬರಹಗಾರ ಸತೀಶ್ ಕುಲಕರ್ಣಿ ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net