ವಿಜೃಂಭಣೆಯ ಕಾರ್ತಿಕ ದೀಪೋತ್ಸವ

SVL29a.jpg
Published on

 ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ 1ನೇ ಕ್ಯಾಂಪ್‌ನ ಶ್ರೀ ಸೀತಾ ಕೋದಂಡರಾಮ ದೇವಾಲಯದಲ್ಲಿ ಗುರುವಾರ ರಾತ್ರಿ ಕಾರ್ತಿಕ ದೀಪೋತ್ಸವ ಅದ್ದೂರಿಯಾಗಿ ನಡೆಯಿತು.  ದೇವಾಲಯದ ಅಂಗಳದಲ್ಲಿ ಮಹಿಳೆಯರು ಮಧ್ಯಾಹ್ನದಿಂದಲೇ ಗಣೇಶ, ತಿರುಪತಿ ವೆಂಕಟೇಶ್ವರ ಸ್ವಾಮಿ, ಶಿವ ಪಾರ್ವತಿ, ಈಶ್ವರ ನಾಗ ದೇವತೆಗಳ ಬಣ್ಣಬಣ್ಣದ ರಂಗೋಲಿ ಬಿಡಿಸಿದರು, ಕೆಲ ಮಹಿಳೆಯರು ಹೂವಿನ ದಳದಿಂದ ಓಂ ಅನ್ನು ಅಲಂಕರಿಸಿದರು. ಉತ್ಸವ ಮೂರ್ತಿ ಪೂಜೆ ನಂತರ ಮಹಿಳೆಯರು ಕುಟುಂಬ ಸಮೇತರಾಗಿ ದೀಪ ಹಚ್ಚಿದರು. ದೀಪೋತ್ಸವ ಪ್ರಯುಕ್ತ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net