ಸಾಕ್ಷರ ಸನ್ಮಾನ ಕಾರ್ಯಕ್ರಮ ಅತ್ಯಂತ ಉಪಯುಕ್ತ

15myk1.jpg
Published on

ಮಾಯಕೊಂಡ :  ಅನಕ್ಷರಸ್ಥ ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೆ ಸರ್ಕಾರ ಸಾಕ್ಷರತಾ ತರಬೇತಿ ನೀಡಿ ಅಕ್ಷರ ಜ್ಞಾನ ಮತ್ತು ಲೆಕ್ಕಾಚಾರದಲ್ಲಿ ಸ್ವಾವಲಂಬಿಗಳಾಗುವಂತೆ ಮಾಡುತ್ತಿರುವುದು ಅತ್ಯಂತ ಉಪಯುಕ್ತ ಎಂದು ಸ್ಥಳೀಯ ಗ್ರಾಪಂ ಅಧ್ಯಕ್ಷೆ ಲತಾ ಮಲ್ಲಿಕಾರ್ಜುನ್ ಹೇಳಿದರು.  ಇಲ್ಲಿನ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಕ್ಷರತಾ ಸನ್ಮಾನ ಮೌಲ್ಯಮಾಪನ ಪರೀಕ್ಷೆ ಯಲ್ಲಿ ಭಾಗವಹಿಸಿ ನಂತರ ಅಭಿಪ್ರಾಯ ಹಂಚಿಕೊಂಡರು.  ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಜನಪ್ರತಿನಿಧಿಗಳಿಗೆ ಓದು ಬರಹ ಅತ್ಯಂತ ಅವಶ್ಯಕ. ಇದಕ್ಕಾಗಿ ಸರ್ಕಾರ ಕಾರ್ಯಕ್ರಮ ರೂಪಿಸಿ ಸಾಕ್ಷರತಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.  ಪಿಡಿಒ ಎನ್. ಶ್ರೀನಿವಾಸ್ ಮಾತನಾಡಿ, ಸರ್ಕಾರದ ಈ ಕಾರ್ಯಕ್ರಮದಡಿ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳಿರುವ ಗ್ರಾಮಗಳಲ್ಲಿ ಸಾಕ್ಷರತಾ ಬೋಧಕರಿಂದ ಐವತ್ತು ದಿನಗಳ ಕಾಲ ಪ್ರತಿದಿನ ಎರಡು ಗಂಟೆಕಾಲ ತರಬೇತಿ ನೀಡಲಾಯಿತು ಎಂದು ತಿಳಿಸಿದರು.  ನಮ್ಮ ಗ್ರಾಪಂ ಅಧ್ಯಕ್ಷೆ ಲತಾ ಮಲ್ಲಿಕಾರ್ಜುನ್, ಸದಸ್ಯ ಮಲ್ಲಪ್ಪ ತರಬೇತಿ ಪಡೆದು ಮೌಲ್ಯಮಾಪನ ಪರೀಕ್ಷೆ ಬರೆದರು ಎಂದು ತಿಳಿಸಿದರು.  ತರಬೇತಿ ನೀಡಿದ ಬೋಧಕ ಎಚ್ ಜಗದೀಶ್, ಸುಲೋಚನಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net