ಕೈಗೆ ಹಗ್ಗ ಕಟ್ಟಿಕೊಂಡು ಅತಿಥಿ ಉಪನ್ಯಾಸಕರ ಪ್ರತಿಭಟನೆ

lect.jpg
Published on

ದಾವಣಗೆರೆ : ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಜಿಲ್ಲೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಬುಧವಾರ ಕೈಗೆ ಹಗ್ಗ ಕಟ್ಟಿಕೊಂಡು, ಕಿವಿಯ ಮೇಲೆ ಹೂವು ಇಟ್ಟುಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
 ಜಿಲ್ಲಾಡಳಿತ ಭವನದ ಬಳಿ 35ನೇ ದಿನದ ಹೋರಾಟದಲ್ಲಿ ಪಾಲ್ಗೊಂಡ ಉಪನ್ಯಾಸಕರು ಕೈಗೆ ಹಗ್ಗ ಕಟ್ಟಿಕೊಳ್ಳುವ ಮೂಲಕ, ಸರ್ಕಾರ ನಮ್ಮ ಭವಿಷ್ಯವನ್ನು ಅತಂತ್ರ ಸ್ಥಿತಿಯಲ್ಲಿ ಬಿಟ್ಟು ಕೈ ಕಟ್ಟಿ ಹಾಕಿದೆ ಎಂದು ಸಾಂಕೇತಿಕವಾಗಿ ತಿಳಿಸುವ ಪ್ರಯತ್ನ ಮಾಡಿದರು.
 ಸರ್ಕಾರ ಹಸಿ ಸುಳ್ಳು ಹೇಳುತ್ತಾ ಕಿವಿಗೆ ಹೂವು ಇಟ್ಟಿದೆ. ಈಗಲಾದರೂ ನಮ್ಮ ಕೈಗೆ ಹಾಕಿರುವ ಕಗ್ಗಂಟನ್ನು ಬಿಡಿಸಿ ನಮ್ಮ ಭವಿಷ್ಯ ರೂಪಿಸಬೇಕು ಎಂದು ಒತ್ತಾಯಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
 ಅತಿಥಿ ಉಪನ್ಯಾಸಕರಾದ ಶ್ಯಾಮ್ ಪ್ರಸಾದ್, ಸಿದ್ದೇಶ್, ಕಳಕಪ್ಪ ಚೌರಿ, ಮೋಹನ್, ಜಗದೀಶ್, ಹನುಮಂತಪ್ಪ, ಪ್ರವೀಣ್ ಕುಮಾರ್, ಶುಭಾ, ರೇಖಾ, ಲಕ್ಷ್ಮೀ, ಚಂದ್ರಿಕಾ, ಪ್ರತಿಭಾ, ವೀಣಾ, ಹಸೀನಾ ಬೇಗಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net