ಅರ್ಥಶಾಸ್ತ್ರ ಅರ್ಥ ಮಾಡಿಸುವ ಪ್ರಯೋಗಾಲಯ

dvg-Laboratory.jpg
Published on

ದಾವಣಗೆರೆ :  ‘ಅರ್ಥಶಾಸ್ತ್ರ ಪ್ರಯೋಗಾಲಯ’ವನ್ನು ನಗರದ ರಾಜನಹಳ್ಳಿ ಸೀತಮ್ಮ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ.  ಅರ್ಥಶಾಸ್ತ್ರ ಉಪನ್ಯಾಸಕ ಶಂಶುದ್ದೀನ್ ಖಾನ್ ಮುಂದಾಳತ್ವದಲ್ಲಿ ಈ ವಿಶಿಷ್ಟ  ಪ್ರಯೋಗಾಲಯ ಅಸ್ತಿತ್ವಕ್ಕೆ ಬಂದಿದೆ. ವಿದ್ಯಾರ್ಥಿಗಳಿಗೆ ಆರ್ಥಿಕ ವಿದ್ಯೆಯನ್ನು ಹೊಸದಾಗಿ ಅರ್ಥೈಸಲು ಇದು ಸೃಜನಶೀಲ ಕೇಂದ್ರವಾಗಿದೆ. ಚಾರ್ಟ್‌ಗಳು, ಚಿತ್ರಣಗಳು, ಗ್ರಾಫ್‌ಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅರ್ಥಶಾಸ್ತ್ರಜ್ಞರ ಚಿತ್ರಗಳು ಸೇರಿ ಹಲವು ಸಂಪನ್ಮೂಲಗಳನ್ನು ಒಳಗೊಂಡಿದೆ.  ಇವುಗಳನ್ನು ಬಣ್ಣ ಬಣ್ಣದ ಗ್ರಾಫ್‌ಗಳು, ಟೇಬಲ್‌ಗಳು ಮತ್ತು ಮಾದರಿಗಳ ಮೂಲಕ ಆಕರ್ಷಕವಾಗಿ ಅಲಂಕರಿಸಲಾಗಿದೆ. ಇದು, ಅರ್ಥಶಾಸ್ತ್ರ ಶಿಕ್ಷಣದಲ್ಲಿ ಹೊಸ ದಾರಿಯನ್ನು ತೆರೆದಿದ್ದು, ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆಗೆ ಸ್ಫೂರ್ತಿಯಾಗಲಿದೆ.  ಈ ಪ್ರಯೋಗಾಲಯವನ್ನು ದಾವಣಗೆರೆಯ ಡಿಡಿಪಿಯು ಪಳನಿವೇಲು ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ. ಪಾಲಾಕ್ಷಿ, ವಿವಿಧ ಕಾಲೇಜು ಪ್ರಾಚಾರ್ಯರಾದ ಓಹಿಲೇಶ್ವರ, ಶಿವಾನಂದ ಕುಡುಪಳಿ, ಪ್ರದೀಪ್, ಟಿ.ಎ. ಕುಸಗತ್ತಿ, ಮಾಜಿ ಪ್ರಾಚಾರ್ಯ ಆರ್. ಸುರೇಶ್, ಉಪನ್ಯಾಸಕ ಮಂಜಪ್ಪ ಹಿತ್ತಲಮನಿ ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net