ಮಹಾ ಕುಂಭಮೇಳಕ್ಕೆ ಸಂಸದೆ ಭೇಟಿ

dvg-kumbha-mela.jpg
Published on

ದಾವಣಗೆರೆ : ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕುಟುಂಬದ ಸದಸ್ಯರೊಂದಿಗೆ ಭೇಟಿ ನೀಡಿದ್ದರು.  ಈ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ಸಂಸದೆ, ತ್ರಿವೇಣಿ ಸಂಗಮದಲ್ಲಿ ಪುಣ್ಯದ ಅನುಭವ ಪಡೆಯಲಾಯಿತು. ಸಾವಿರಾರು ಭಕ್ತರ ನಡುವೆ ಪವಿತ್ರ ಸಂಗಮದಲ್ಲಿ ಮಿಂದೇಳಲಾಯಿತು. ತಂಪಾದ ನೀರಿನ ಸ್ಪರ್ಶದಿಂದ ಮನಸ್ಸು ಚೈತನ್ಯಗೊಂಡಿತು ಎಂದು ತಿಳಿಸಿದ್ದಾರೆ.  ನಾನು ಅಲ್ಲಿ ಕಂಡ ನೋಟಗಳು ಅಪರೂಪದವು. ನಾಗಾ ಸನ್ಯಾಸಿಗಳ ಅದ್ಭುತ ಸನ್ನಿಧಾನ, ಗಂಗಾ ಆರತಿಯ ಪವಿತ್ರ ಜ್ಯೋತಿ, ಸನ್ಯಾಸಿಗಳು ಮತ್ತು ಭಕ್ತರ ಜಪ-ತಪದ ಆಧ್ಯಾತ್ಮಿಕ ಶಕ್ತಿ ಅಲ್ಲಿ ಕಂಡುಬಂದಿತು. ಸಂಗಮದ ತೀರದಲ್ಲಿ ಹೋಮ, ಯಜ್ಞ ಮತ್ತು ಪ್ರವಚನಗಳ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು ಎಂದು ಬಣ್ಣಿಸಿದ್ದಾರೆ.  ಆ ಕ್ಷಣ ನಾನು ಕೂಡ ಭಗವಂತನ ಅನುಗ್ರಹವನ್ನು ಅನುಭವಿಸಿದೆ. ನಂಬಿಕೆ, ಭಕ್ತಿ ಮತ್ತು ಶ್ರದ್ಧೆಯಿಂದ ತುಂಬಿದ ಆ ಕ್ಷಣಗಳು ನನ್ನ ಮನಸ್ಸಿಗೆ ಶಾಂತಿ ಮತ್ತು ಸಂತೋಷ ತಂದಿತು ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ. ಈ ವೇಳೆ ಪುತ್ರ ಸಮರ್ಥ ಶಾಮನೂರು, ಪುತ್ರಿ ಡಾ.ಶ್ರೇಷ್ಠಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net