ಜಿಲ್ಲಾಡಳಿತದಿಂದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ

krishna.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ಯಾದವ ಸಮಾಜದವರು ವಾಸಿಸುವ 39 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.
 ಜಿಲ್ಲಾಡಳಿತದಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
 ಜಿಲ್ಲೆಯ 39 ಕಂದಾಯ ಗ್ರಾಮಗಳ ಪೈಕಿ ಜಗಳೂರು ತಾಲೂಕಿನ 19ಕ್ಕೂ ಅಧಿಕ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಮಹಾಭಾರತ ಮಹಾಕಾವ್ಯದಲ್ಲಿ ಇರುವ ಹೆಸರುಗಳನ್ನೆ ಗ್ರಾಮಗಳಿಗೆ ಇಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
 ಅಲ್ಲದೇ ಬಾಕಿ ಉಳಿದ ಗ್ರಾಮಗಳನ್ನು ಸಹ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುವುದು. ಯಾದವ ಸಮುದಾಯ ಸೇರಿ ಧ್ವನಿ ಇಲ್ಲದ ಸಮುದಾಯಗಳನ್ನು ಗಮನದಲ್ಲಿಸಿಕೊಂಡು ಅವರ ಅಭಿವೃದ್ದಿಗೂ ಸಹಕರಿಸಲಾಗುವುದು ಎಂದರು.
 ಶ್ರೀಕೃಷ್ಣ ಪರಮಾತ್ಮನಂತೆ ಆಧ್ಯಾತ್ಮಿಕ ಜ್ಞಾನ ಹಾಗೂ ಚಾಣಾಕ್ಷತೆ ಹೊಂದಬೇಕು ಎಂದು ತಿಳಿಸಿದರು.
 ಎಎಸ್‌ಪಿ ರಾಮಗೊಂಡ ಬಸರಗಿ, ಜಿ.ಪಂ.ಉಪಕಾರ್ಯದರ್ಶಿ ಕೃಷ್ಣ ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ. ರಮೇಶ್, ಕೌಶಲ್ಯಾಭಿವೃದ್ಧಿ ಉಪನಿರ್ದೇಶಕ ಬಸವನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net