ಶವಸಂಸ್ಕಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮ

corona
Published on

ದಾವಣಗೆರೆ: ಕೋವಿಡ್ ವೈರಸ್ ಸೋಂಕಿನಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಶವಸಂಸ್ಕಾರಕ್ಕೆ ಖಬರಸ್ತಾನಗಳಲ್ಲಿ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ವಕ್ಫ್ ಮಂಡಳಿ ಎಚ್ಚರಿಸಿದೆ.

ರಾಜ್ಯದ ಹಲವೆಡೆ ಕರೊನಾದಿಂದ ಸಾವಿಗೀಡಾದ ಮುಸ್ಲಿಮರ ಶವಸಂಸ್ಕಾರಕ್ಕೆ ಖಬರಸ್ತಾನದಲ್ಲಿ ಸ್ಥಳ ನೀಡಲು ನಿರಾಕರಿಸುತ್ತಿರುವ, ಅನಗತ್ಯ ಕಿರುಕುಳ ನೀಡುತ್ತಿರುವ ವರದಿಗಳು ಬಂದಿವೆ.

ಇನ್ನು ಮುಂದೆ ಜಿಲ್ಲೆಯ ಮುಸ್ಲಿಮರ ಶವಸಂಸ್ಕಾರಕ್ಕೆ ತೊಂದರೆ ಉಂಟು ಮಾಡುವ, ಸ್ಥಳ ನಿರಾಕರಿಸುವವವರ ವಿರುದ್ಧ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ವಕ್ಫ್ ಕಾಯ್ದೆ 1995 ಹಾಗೂ ಭಾರತ ದಂಡ ಸಂಹಿತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮಹಮ್ಮದ್ ಸಿರಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net