ನಿರಂಜನಾನಂದ ಪುರಿ ಶ್ರೀ ಜನ್ಮದಿನ

dvg niranjanananda sri april 24
ದಾವಣಗೆರೆಯಲ್ಲಿ ಜಿಲ್ಲಾ ಕುರುಬ ಸಮಾಜದಿಂದ ನೀಡಲಾದ ದಿನಸಿ ಕಿಟ್‌ಗಳನ್ನು ಕಾಗಿನೆಲೆ ಮಹಾಸಂಸ್ಥಾನದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರ 44ನೇ ಜನ್ಮದಿನದ ನಿಮಿತ್ತ ಸಂತ್ರಸ್ತರಿಗೆ ಕಿಟ್‌ಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮುಖಂಡರಾದ ವಿನಯ್ ಜೋಗಪ್ಪನವರ್ ಇದ್ದರು. 
Published on

ದಾವಣಗೆರೆ: ಕಾಗಿನೆಲೆ ಮಹಾಸಂಸ್ಥಾನದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರ 44ನೇ ಜನ್ಮದಿನ ನಿಮಿತ್ತ ಜಿಲ್ಲಾ ಕುರುಬ ಸಮಾಜದಿಂದ ಶುಕ್ರವಾರ ಬೆಳಗ್ಗೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂತ್ರಸ್ತರಿಗೆ ಆಹಾರದ ಕಿಟ್ ಹಾಗೂ ಮಾಸ್ಕ್‌ಗಳನ್ನು ವಿತರಿಸಲಾಯಿತು.

ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಮಹಾಮಾರಿ ಕರೊನಾದಿಂದ ದೇಶವೇ ಸಂಕಷ್ಟಕ್ಕೀಡಾಗಿದೆ. ಹೀಗಾಗಿ ನಮ್ಮ ಜನ್ಮದಿನ ಆಚರಿಸಲು ಭಕ್ತರು ಮಠಕ್ಕೆ ಬರದೆ ಸಂಕಷ್ಟಕ್ಕೀಡಾದವರ ನೆರವಿಗೆ ಧಾವಿಸುವಂತೆ ಆದೇಶಿಸಲಾಯಿತು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ವಿರುದ್ಧ ಹೋರಾಡಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸಮುದಾಯದ ಮುಖಂಡರಾದ ವಿನಯ್ ಜೋಗಪ್ಪನವರ್, ಉಮೇಶ್, ದೀಪಕ್ ಜೋಗಪ್ಪನವರ್, ಮನು, ಮೀಸೆ ರಾಮಣ್ಣ, ಹರೀಶ್, ವಿಕಾಸ್, ನವೀನ್, ಗಿರಿ, ಕರಿಗಾರ್ ಮಂಜು, ಶಿವಾನಂದ್, ಸಂಜಯ್, ಮಂಜು, ನಂದಿಗಾವಿ ಶ್ರೀನಿವಾಸ್, ರಾಜೇಶ್, ಬಿ. ಲಿಂಗರಾಜ್, ಕೆ. ರೇವಣಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net