

ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನ್ಮದಿನದ ಹಿನ್ನೆಲೆಯಲ್ಲಿ ಜಿಲ್ಲೆಯ ಕೇಶ ವಿನ್ಯಾಸಗಾರರಿಗೆ 500 ಕಿಟ್‌ಗಳನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಮ್ಮ ಗೃಹ ಕಚೇರಿಯ ಆವರಣದಲ್ಲಿ ಮಂಗಳವಾರ ವಿತರಿಸಿದರು. ಸ್ಥಳೀಯ ಕೇಶ ವಿನ್ಯಾಸಗಾರರ ವೃತ್ತಿ ಜೀವನಕ್ಕೆ ಅಗತ್ಯವಾದ ಆಧಾರವನ್ನು ಒದಗಿಸುವುದರ ಜತೆಗೆ, ಅವರ ಸ್ವಾವಲಂಬನೆಗೆ ಬಲ ನೀಡುವ ಉದ್ದೇಶದಿಂದ ಎಸ್.ಎಸ್.ಎಂ. ಫೌಂಡೇಶನ್‌ನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕಿಟ್ನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ವೃತ್ತಿಜೀವನ ನಡೆಸಬೇಕೆಂದು ಸಲಹೆ ನೀಡಿದರು. ಮಾಜಿ ಮೇಯರ್ ಕೆ. ಚಮನ್‌ಸಾಬ್ ಇದ್ದರು.