ದಾವಣಗೆರೆ ವಿವಿ ಆವರಣದಲ್ಲಿ ಯುವತಿ ಅಪಹರಣ ಯತ್ನ

DAVANAGERE-UNIVERSITY_1.jpg
Published on

ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬರನ್ನು ಸಿನಿಮೀಯ ಮಾದರಿಯಲ್ಲಿ ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
 ವಿದ್ಯಾರ್ಥಿನಿ ನೆರೆಯ ಜಿಲ್ಲೆಯವರಾಗಿದ್ದು ಎಂಬಿಎ 2ನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ಗುರುವಾರ ವಿವಿ ಆವರಣದಲ್ಲಿ ಇಬ್ಬರು ಯುವಕರು ಸೇರಿ ಆಕೆಯನ್ನು ಬಲವಂತವಾಗಿ ಕರೆದೊಯ್ಯುತ್ತಿದ್ದಾಗ ರಕ್ಷಣೆಗಾಗಿ ಯುವತಿ ಚೀರಾಡಿದ್ದಾಳೆ. ವಿವಿಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕಾರಿಗೆ ಅಡ್ಡ ನಿಂತು ಯುವತಿಯನ್ನು ರಕ್ಷಿಸಿ, ವಿದ್ಯಾರ್ಥಿನಿಯನ್ನು ಬಲವಂತವಾಗಿ ಕರೆದುಕೊಂಡು ಹೋಗುವುದು ತಪ್ಪು ಎಂದು ಬುದ್ಧಿವಾದ ಹೇಳಿದರು.
 ವಿದ್ಯಾರ್ಥಿನಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿದ್ದು, ಪೊಲೀಸರು ಆಕೆಯ ಹೇಳಿಕೆ ಪಡೆದು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ. ಯುವತಿಯನ್ನು ಬಲವಂತವಾಗಿ ಕರೆದೊಯ್ಯುವಾಗ ಅವರ ತಾಯಿಯೂ ಇದ್ದರು. ಕೌಟುಂಬಿಕ ವಿಚಾರ ಇದಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
 ...
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net