

ದಾವಣಗೆರೆ : ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಮಂಗಳವಾರ ಕಡೇ ಕಾರ್ತಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ ಶ್ರೀ ಅಮ್ಮನವರಿಗೆ ವೇದೋಕ್ತ ಪಂಚಾಮೃತ ಅಭಿಷೇಕ, ವಿಶ್ವಕರ್ಮ ಅಷ್ಟೋತ್ತರ ಪೂಜೆ, ಪುಷ್ಪಾಲಂಕಾರ, ವಿಶೇಷ ಪೂಜಾ ಅಲಂಕಾರ, ಮಹಾ ಮಂಗಳಾರತಿ ಕಾರ್ಯಕ್ರಮ, ರಾತ್ರಿ 7.30 ರ ನಂತರ ದೀಪಾರಾಧನೆ ಕಡೇ-ಕಾರ್ತಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಭಕ್ತರು, ಸಮಾಜದವರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನ ಆಡಳಿತ ಸಮಿತಿಯ ಟ್ರಸ್ಟ್ನಿಂದ ವಿನಂತಿಸಿಕೊಳ್ಳಲಾಗಿದೆ.