ವಿಜೃಂಭಣೆಯ ಕಡೇ ಕಾರ್ತಿಕ ಮಹೋತ್ಸವ

temple.jpg
Published on

ದಾವಣಗೆರೆ: ನಗರದ ಕೆಬಿ ಬಡಾವಣೆ ದೀಕ್ಷಿತ್ ರಸ್ತೆಯ ಶ್ರೀ ವರಸಿದ್ಧಿ ಏಕದಂತ ವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಕಡೇ ಕಾರ್ತಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
 ಬೆಳಗ್ಗೆ ರುದ್ರಾಭಿಷೇಕ, ಬೆಳ್ಳಿ ಮತ್ತು ಹೂವಿನ ಅಲಂಕಾರ ಮಾಡಲಾಗಿತ್ತು. ಸಂಜೆ ದೇವಸ್ಥಾನದ ಆವರಣದಲ್ಲಿ ಕಾರ್ತಿಕೋತ್ಸವ ನೆರವೇರಿತು. ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದ ಭಕ್ತರು ಉತ್ಸವದ ದೃಶ್ಯವನ್ನು ಕಣ್ತುಂಬಿಕೊಂಡರು. ನಾದಸ್ವರ ಇನ್ನಿತರ ವಾದ್ಯಗಳು ಮೊಳಗಿದವು. 1500ಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದರು.
 ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಕೆ. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಹಾಗೂ ಧರ್ಮದರ್ಶಿ ಕೆ.ಜಿ. ಶಿವಕುಮಾರ್, ಕಿರುವಾಡಿ ಸೋಮಶೇಖರ್, ಕಿರುವಾಡಿ ಸುಭಾಷ್‌ಚಂದ್ರ, ಡಿ.ಎಚ್. ಮೋಹನ್ ಕುಮಾರ್, ಗೋಡಂಬಿ ರಾಜು, ಬ್ಯಾಡಗಿ ಚಂದ್ರು, ವಿಶ್ವಾಸ್, ತಿಪ್ಪೇಶ್, ರಾಜಶೇಖರ್ ಪಾಲ್ಗೊಂಡಿದ್ದರು. ದೇವಸ್ಥಾನದ ಅರ್ಚಕ ವಿಜಯ ಕುಮಾರ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net