ಕಾರ್ಗಿಲ್ ವಿಜಯ ದಿವಸ ಆಚರಣೆ

j-college.jpg
Published on

ದಾವಣಗೆರೆ : ನಗರದ ಶ್ರೀ ಸುಪಾರ್ಶ್ವನಾಥ ವಿದ್ಯಾಸಂಸ್ಥೆಯ ಜೈನ್ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಕಾರ್ಗಿಲ್ ವಿಜಯ ದಿವಸ, ವಿದ್ಯಾರ್ಥಿ ಪದಾಧಿಕಾರಿ ಸಂಘಟನೆ ಮತ್ತು ಹೂಡಿಕೆ ಕಾರ್ಯಕ್ರಮ ನಡೆಯಿತು.
 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹಿರಿಯ ಅಧಿಕಾರಿ ಪಿ.ಬಿ. ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಜ್ಞಾನವಂತರಾಗಿ ದೇಶದ ಶಕ್ತಿಯಾಗಬೇಕು ಎಂದು ತಿಳಿಸಿದರು.
 ಎಂ.ಎಂ. ಕಾಲೇಜು ನಿವೃತ್ತ ಪ್ರಾಂಶುಪಾಲ ಎಚ್.ವಿ. ವಾಮದೇವಪ್ಪ ಮಾತನಾಡಿ, ಪ್ರತಿಯೊಬ್ಬರಲ್ಲೂ ನಾಯಕತ್ವದ ಗುಣ ಇರುತ್ತದೆ. ಅದನ್ನು ಅಭಿವ್ಯಕ್ತಗೊಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
 ಜೈನ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್ ಅಧ್ಯಕ್ಷ ಅಚಲ್ ಚಂದ್ ಜೈನ್ ಹಾಗೂ ನಿರ್ದೇಶಕ ಕುನಾಲ್ ಪಮರ್, ಜೈನ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ಎಸ್. ನಟರಾಜ್ ಹಾಗೂ ಸಂಯೋಜಕಿ ಯಶೋಧರ ಇದ್ದರು.
 ಸಹಶಿಕ್ಷಕರಾದ ಕೆ. ಸುಜಾತ ಸ್ವಾಗತಿಸಿದರು. ಹಮೀದ್‌ಖಾನ್ ಸಹಶಿಕ್ಷಕಿ ನಿರೂಪಿಸಿದರು. ರೋಜಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net