ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನಕ್ಕೆ ಸಹಕಾರ

dvg-kannada.jpg
Published on

ದಾವಣಗೆರೆ :· ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಶ್ವ ಕನ್ನಡಿಗರ ಟ್ರಸ್ಟ್ ಸಹಯೋಗದಲ್ಲಿ ಮೇ 7 ರಿಂದ 12 ರವರೆಗೆ ನಗರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನ ಹಾಗೂ ವಸ್ತು ಪ್ರದರ್ಶನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ತಮ್ಮ ಗೃಹ ಕಚೇರಿಯಲ್ಲಿ ಶನಿವಾರ, ಖ್ಯಾತ ಗಾಯಕ ಗುರುರಾಜ ಹೊಸಕೋಟೆ ರಚಿಸಿರುವ ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನದ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.  ಈ ಸಮ್ಮೇಳನದಲ್ಲಿ ಸಾಹಿತ್ಯ, ನವ ಲೇಖಕರ ಮೇಳ, ಶಿಕ್ಷಣ ಮೇಳ, ಸಿನಿ ಮತ್ತು ಕಲಾವಿದರ ಮೇಳ, ಕೃಷಿ ಮೇಳ, ಉದ್ಯೋಗ ಮೇಳ, ಯೂ ಟ್ಯೂಬರ್ಸ್ ಮೇಳ, ಹೀಗೆ ಹಲವು ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ವಿಶಿಷ್ಟ ಹಾಗೂ ವಿನೂತನವಾಗಿದೆ ಎಂದು ತಿಳಿಸಿದರು.  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಈ ಸಮ್ಮೇಳನವು ಆರು ದಿನಗಳ ಕಾಲ ನಡೆಯಲಿದ್ದು ಇದರಲ್ಲಿ ನಾಡಿನ ಖ್ಯಾತ ಸಿನಿಮಾ ನಟರು, ನಿರ್ದೇಶಕರು, ರಂಗಭೂಮಿ ಕಲಾವಿದರು, ಸಂಗೀತಗಾರರು, ಲೇಖಕರು, ಚಿತ್ರಕಲಾ ಕಲಾವಿದರು, ಕೃಷಿ ತಜ್ಞರು, ಪಂಡಿತರು, ವಿಜ್ಞಾನಿಗಳು, ಮಕ್ಕಳು, ಮಹಿಳೆಯರು, ಜನಪ್ರತಿನಿಧಿಗಳು, ಹೀಗೆ ನಾಡಿನ ಹಲವಾರು ಕ್ಷೇತ್ರದ  ಗಣ್ಯರು ಭಾಗವಹಿಸಲಿದ್ದಾರೆ ಎಂದರು.  ಪರಿಷತ್ತಿನ ಬಿ. ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಅಣಬೇರು ತಾರೇಶ್, ಎಸ್.ಎಂ. ಮಲ್ಲಮ್ಮ, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ರಾಜಶೇಖರ ಗುಂಡಗತ್ತಿ, ರುದ್ರಾಕ್ಷಿ ಬಾಯಿ, ಷಡಕ್ಷರಪ್ಪ ಎಂ. ಬೇತೂರು, ವೀಣಾ ಕೃಷ್ಣಮೂರ್ತಿ, ವೀಣಾ ಮಹಾಂತೇಶ್, ಕೆ.ಶಿವಶಂಕರ್, ಎ.ಎಂ ಮಲ್ಲಿಕಾರ್ಜುನ್, ಕುಸುಮಾ ಲೋಕೇಶ್, ಪ್ರೇಮಾ ಸೋಮಶೇಖರ್, ಲೀಲಾ ಶೇಖರ, ವಾಣಿ ಎಸ್, ವಿಶ್ವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net