19 ರಂದು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

j.jpg
Published on

ದಾವಣಗೆರೆ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಬುಧವಾರ ಬೆಳಗ್ಗೆ 9.30 ಕ್ಕೆ ಮಹಾನಗರ ಪಾಲಿಕೆ ಅವರಣದಲ್ಲಿ ನಡೆಯಲಿದೆ.
 ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕಾರ್ಯಕ್ರಮ ಉದ್ಘಾಟಿಸುವರು. ಮೇಯರ್ ವಿನಾಯಕ ಪೈಲ್ವಾನ್ ಮತ್ತು ಆಯುಕ್ತೆ ರೇಣುಕಾ, ಸಂಘದ ನಾಮಫಲಕ ಅನಾವರಣ ಮಾಡುವರು.
 ಮಹಾನಗರ ಪಾಲಿಕೆಯು ಸಂಘದ ಜಿಲ್ಲಾ ಘಟಕದ ಕಚೇರಿಗಾಗಿ ಕಟ್ಟಡ ನೀಡಿದೆ. ಈ ಹಿಂದೆ ನಗರಸಭೆ ಇದ್ದ ಸಂದರ್ಭದಲ್ಲಿ ಸಂಘದ ಕಚೇರಿಗಾಗಿ ಕಟ್ಟಡವನ್ನು ನಿರ್ಮಿಸಿ ಕೊಟ್ಟಿತ್ತು. ಅದನ್ನು 1996ರಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಉದ್ಘಾಟಿಸಿದ್ದರು.
 ನಂತರದ ದಿನಗಳಲ್ಲಿ ಕಾರಣಾಂತರದಿಂದ ಆ ಕಟ್ಟಡ ಕೈಬಿಟ್ಟು ಹೋಗಿತ್ತು. ಅದನ್ನೀಗ ಸಂಘದ ವಶಕ್ಕೆ ಒಪ್ಪಿಸುವಂತೆ ಮಾಡಿಕೊಂಡಿದ್ದ ಮನವಿಯನ್ನು ಪಾಲಿಕೆ ಪುರಸ್ಕರಿಸಿ ಕಟ್ಟಡವನ್ನು ಕಚೇರಿಯನ್ನಾಗಿ ಮಾಡಿಕೊಳ್ಳಲು ನೀಡಿದೆ. ಮೇಯರ್ ವಿನಾಯಕ ಪೈಲ್ವಾನ್ ಕಟ್ಟಡದ ಬೀಗದ ಕೈಯನ್ನು ಹಾಗೂ ಆಯುಕ್ತೆ ರೇಣುಕಾ ಆದೇಶದ ಪ್ರತಿಯನ್ನು ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಉಪಾಧ್ಯಕ್ಷ ಎಚ್.ಎನ್. ಪ್ರಕಾಶ್ ಅವರಿಗೆ ಹಸ್ತಾಂತರಿಸಿದರು.
 ಖಜಾಂಚಿ ಎನ್.ವಿ. ಬದ್ರಿನಾಥ, ಉಪಾಧ್ಯಕ್ಷ ಆರ್.ಎಸ್. ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ  ಜೆ.ಎಸ್ ವೀರೇಶ್, ನಿಂಗೋಜಿರಾವ್, ನಿರ್ದೇಶಕರಾದ ವೇದಮೂರ್ತಿ, ಬಿ.ಎಸ್.ಮುದ್ದಯ್ಯ, ಕೃಷ್ಣೋಜಿರಾವ್, ಎನ್.ಆರ್. ರವಿ, ಕೆ.ಸಿ. ಮಂಜುನಾಥ, ಗುರುಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net