ವಿಶೇಷ ಆಭರಣಗಳ ಪ್ರದರ್ಶನ, ಮಾರಾಟ

abharana.jpg
Published on

ದಾವಣಗೆರೆ : ವೈವಿಧ್ಯಮಯ ವಿನ್ಯಾಸ ಹಾಗೂ ಗುಣಮಟ್ಟಕ್ಕೆ ಹೆಸರಾದ 155 ವರ್ಷಗಳ ಇತಿಹಾಸವಿರುವ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜುವೆಲರ್ಸ್ ವತಿಯಿಂದ ವಿಶೇಷ ಆಭರಣಗಳ ಪ್ರದರ್ಶನ ಹಾಗೂ ಮಾರಾಟವನ್ನು ಸ್ಥಳೀಯ ಗ್ರಾಹಕರಿಗಾಗಿ ನಗರದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಶನಿವಾರ ಆರಂಭವಾಯಿತು.  ಸೋಮವಾರದ ವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಶುದ್ಧ ಚಿನ್ನ ಮತ್ತು ರತ್ನಗಳು ಹಾಗೂ ಅತ್ಯುತ್ತಮವಾದ ಕರಕುಶಲತೆಯೊಂದಿಗೆ ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹವನ್ನು ವಿಶಿಷ್ಟ ಶ್ರೇಣಿಯೊಂದಿಗೆ ಪ್ರದರ್ಶಿಸಲಾಗುತ್ತಿದೆ.  ಇಲ್ಲಿನ ಆಭರಣ ಸಂಗ್ರಹಗಳು ವೈಢೂರ್ಯ, ಸಿಟ್ರಿನ್, ಮುತ್ತುಗಳು, ನೀಲ, ಮಾಣಿಕ್ಯಗಳಂತಹ ಅಪರೂಪದ ವಜ್ರಗಳ ಸೂಕ್ಷ್ಮ ವಿನ್ಯಾಸಗಳೊಂದಿಗೆ ಸೊಬಗು ಮತ್ತು ಕ್ಲಾಸಿಕ್ ಶೈಲಿಯ ಸಮ್ಮಿಲನವಾಗಿವೆ.  ಕೈಗೆಟುಕುವ ಬೆಲೆಯ, ಸಿಕೆಸಿ ಹಾಲ್‌ಮಾರ್ಕ್ ಹೊಂದಿರುವ ಶುದ್ಧ ಬೆಳ್ಳಿಯ ಆಭರಣಗಳಿವೆ. ಶೈಲಿ ಮತ್ತು ಫ್ಯಾಷನ್ ಅನ್ನು ಅನ್ವೇಷಿಸಲು ಉತ್ಸುಕರಾಗಿರುವ ಪ್ರತಿಯೊಬ್ಬ ಮಹಿಳೆಗೆ ಇಲ್ಲಿನ ಸಂಗ್ರಹವು ಅತ್ಯಾಧುನಿಕ ಆಭರಣ ಶ್ರೇಣಿಯನ್ನು ಒದಗಿಸುತ್ತದೆ. ಪ್ರತಿಯೊಂದು ಆಭರಣವು ಆಕರ್ಷಕ ಕತೆಯನ್ನು ಹೊಂದಿದೆ. ಸರಳತೆ, ತಾಜಾತನ ಮತ್ತು ಸ್ಪಷ್ಟತೆಯ ಮೌಲ್ಯಗಳಿಂದ ಸ್ಫೂರ್ತಿ ಪಡೆದಿದೆ.  ದಾವಣಗೆರೆಯ ಗ್ರಾಹಕರಿಗಾಗಿ ಸಿ. ಕೃಷ್ಣಯ್ಯ ಚೆಟ್ಟಿ ಜ್ಯೂವೆಲರ್ಸ್ ವಿಶೇಷ ಕೊಡುಗೆಯೊಂದಿಗೆ ಬಂದಿದೆ. ಬೆಳ್ಳಿ, ಚಿನ್ನ, ಡೈಮಂಡ್ ಮೇಲೆ ವಿಶೇಷ ರಿಯಾಯಿತಿ ಇದೆ.  ಮೇಳವನ್ನು ಉದ್ಯಮಿ ಎಸ್.ಎಸ್. ಗಣೇಶ್ ಉದ್ಘಾಟಿಸಿದರು. ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯೂವೆಲರ್ಸ್‌ನ ಕಾರ್ಯಕಾರಿ ನಿರ್ದೇಶಕಿ ತ್ರಿವೇಣಿ ವಿನೋದ್, ಸ್ಟೋರ್ ಹೆಡ್ ಶ್ರೀಹರಿ, ಬ್ರಾೃಂಡ್ ಹೆಡ್ ತೇಜಸ್, ಡಿಜೈನರ್ ಇಂದ್ರಾಣಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net