ರಾಜಣ್ಣ ಹಿರಿತನಕ್ಕೆ ಗೌರವ ನೀಡಬೇಕಿತ್ತು

dvg-Nikhil-Kumaraswamy.jpg
Published on

ದಾವಣಗೆರೆ  : ಕಾಂಗ್ರೆಸ್ ಪಕ್ಷ ಕೆ.ಎನ್. ರಾಜಣ್ಣ ಅವರ ಹಿರಿತನಕ್ಕೆ ಗೌರವ ನೀಡಬೇಕಿತ್ತು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.  ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಣ್ಣ ಅವರಿಂದ ರಾಜೀನಾಮೆ ಕೇಳಬಹುದಿತ್ತು. ವಜಾಗೊಳಿಸುವ ಮೂಲಕ ಅವರಿಗೆ ಮುಜುಗರ ಉಂಟಾಗುವಂತೆ ಆ ಪಕ್ಷ ನಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.  ಕಾಂಗ್ರೆಸ್ ಮುಖಂಡರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನ್ಯಾಯ ನೀಡುವ ಮಾತನಾಡುತ್ತಾರೆ. ಆದರೆ ರಾಜಣ್ಣ ಅವರೊಂದಿಗೆ ನಡೆದುಕೊಂಡ ರೀತಿ ಸರಿಯಿಲ್ಲ. ರಾಜಣ್ಣ ಅವರು ಸತ್ಯವನ್ನೇ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಇಲ್ಲ ಎಂದು ತಿಳಿಸಿದರು.  ಜೆಡಿಎಸ್ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಕೈಗೆತ್ತಿಕೊಂಡಿದ್ದೇವೆ. ಮಿಸ್ಡ್ ಕಾಲ್ ಮೂಲಕ 50 ಲಕ್ಷ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ. ಗ್ರಾ.ಪಂ, ವಾರ್ಡ್, ಬೂತ್‌ನ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಆದ್ಯತೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ದೊಡ್ಡ ಸಮಾಶಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.  ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಹೊಂದಾಣಿಕೆಯು ಮುಂದುವರಿಯುತ್ತದೆ. ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲೂ ಸಮನ್ವಯ ಸಮಿತಿಗಳನ್ನು ಮಾಡುವ ಚಿಂತನೆಯಿದೆ. ರಾಜ್ಯದಲ್ಲಿ ಜನರೊಂದಿಗೆ ಜನತಾದಳ ಅಭಿಯಾನ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.  ಧರ್ಮಸ್ಥಳದ ವಿಚಾರ ಸೂಕ್ಷವಾದುದು. ಎಸ್‌ಐಟಿ ತನಿಖೆಯ ನಂತರ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಚಿದಾನಂದಪ್ಪ, ಪಕ್ಷದ ಮುಖಂಡ ಅಮಾನುಲ್ಲಾ ಖಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net