ಫೆ. 8. 9 ರ‌ಂದು ವಾಲ್ಮೀಕಿ ಜಾತ್ರಾ ಮಹೋತ್ಸವ

17nmt1-photo.jpg
Published on

ನ್ಯಾಮತಿ : ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ 2025ರ ಫೆ. 8, 9ರಂದು  ಶ್ರೀಮಠದ 27 ನೇ ವಾರ್ಷಿಕೋತ್ಸವ, ಲಿಂ. ಜಗದ್ಗುರು ಪುಣ್ಯಾನಂದಪುರಿ ಸ್ವಾಮೀಜಿ ಅವರ 18ನೇ ವರ್ಷದ ಪುಣ್ಯಾರಾಧನೆ, ತಮ್ಮ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ(ವಾಲ್ಮೀಕಿ ಜಾತ್ರಾ ಮಹೋತ್ಸವ) ನಡೆಯಲಿದೆ ಎಂದು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.  ಪಟ್ಟಣದ ಬೇಡರ ಕಣ್ಣಪ್ಪ ದೇಗುಲದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ವಿತರಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.  ಸಮುದಾಯದ ತಾಲೂಕು ಅಧ್ಯಕ್ಷ ಸೋಮಶೇಖರಪ್ಪ, ಕುದುರೆಕೊಂಡ ಪರಮೇಶ್ವರಪ್ಪ, ಮಾದಾಪುರ ರುದ್ರೇಶಪ್ಪ, ವಿಜಯಕುಮಾರ್, ವೀರಭದ್ರಪ್ಪ, ಗ್ರಾಪಂ ಮಾಜಿ ಸದಸ್ಯ ನ್ಯಾಮತಿ ಗಿರೀಶ, ನಿವೃತ್ತ ತಹಸೀಲ್ದಾರ್ ನಾಗರಾಜಪ್ಪ, ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net