ಅಟಲ್ ಭೂಜಲ ಯೋಜನೆ ಕಲಾ ಜಾಥಾಕ್ಕೆ ಚಾಲನೆ

dvg-Atal-jatha-18.jpg
Published on

ದಾವಣಗೆರೆ : ಕುಸಿಯುತ್ತಿರುವ ಅಂತರ್ಜಲ ನಿರ್ವಹಣೆ ಕುರಿತು ಸಮುದಾಯಕ್ಕೆ ಹೆಚ್ಚಿನ ಅರಿವು ಮೂಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ ಇಟ್ನಾಳ್ ತಿಳಿಸಿದರು.
 ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶುಕ್ರವಾರ, ಅಟಲ್ ಭೂಜಲ ಯೋಜನೆ ಕಲಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಜಾಗೃತಿ ಜಾಥಾದಿಂದ ಸಹಾಯವಾಗಲಿದೆ. ಅಂತರ್ಜಲ ಕುಸಿಯುವುದನ್ನು ಇದರಿಂದ ತಡೆಗಟ್ಟಬಹುದು ಎಂದು ಹೇಳಿದರು.
 ಜಿ.ಪಂ. ಉಪ ಕಾರ್ಯದರ್ಶಿ ಎಲ್. ಕೃಷ್ಣಾನಾಯ್ಕ, ಮಲ್ಲಾ ನಾಯ್ಕ, ಹಿರಿಯ ಭೂ ವಿಜ್ಞಾನಿ ಆರ್. ಬಸವರಾಜ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಅಟಲ್ ಭೂಜಲ ಯೋಜನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಅಂಬರೀಶ್, ತಜ್ಞರು, ಜಿಲ್ಲಾ ಅನುಷ್ಠಾನ ಪಾಲುದಾರ ಸಂಸ್ಥೆ ಸಿಬ್ಬಂದಿ ಹಾಗೂ ಕಲಾ ತಂಡದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net