ನಟ ಜಗ್ಗೇಶ್ ಪೋಸ್ಟರ್ ಮುಚ್ಚಿದ ಅಧಿಕಾರಿಗಳು

dvg-poster-03-1.jpg
Published on

ದಾವಣಗೆರೆ: ಸಿ-ವಿಜಿಲ್ ಆ್ಯಪ್‌ನಲ್ಲಿ ಬಂದ ದೂರು ಆಧರಿಸಿ ಇಲ್ಲಿನ ಗೀತಾಂಜಲಿ ಚಿತ್ರಮಂದಿರಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿದ್ದ ಎಫ್‌ಎಸ್‌ಟಿ ತಂಡದ ಸಿಬ್ಬಂದಿ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಪೋಸ್ಟರ್‌ಗಳ ಮೇಲೆ ಬಿಳಿ ಹಾಳೆ ಅಂಟಿಸಿದರು.
 ನಟ ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಚಿತ್ರವು ಗೀತಾಂಜಲಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ.
 ಈ ಬಗ್ಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರತಿಕ್ರಿಯಿಸಿ, ಸಿ-ವಿಜಿಲ್‌ನಲ್ಲಿ ಬಂದ ದೂರು ಆಧರಿಸಿ ತಕ್ಷಣಕ್ಕೆ ಕ್ರಮ ಕೈಗೊಂಡಿದ್ದಾರೆ. ಮಾಹಿತಿಯ ಕೊರತೆಯಿಂದ ಹಾಗೆ ಆಗಿತ್ತು. ಸ್ಪಷ್ಟೀಕರಣ ಪಡೆದು ಸರಿಪಡಿಸಲಾಗಿದೆ. ವಾಣಿಜ್ಯ ಚಟುವಟಿಕೆ ಆಗಿರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net