ಸಿಬಿಐ ತನಿಖೆ ನಡೆಸಲು ಆಗ್ರಹ

aravind-bellad.jpg
Published on

ದಾವಣಗೆರೆ : ನೇಹಾ ಹತ್ಯೆ ಪ್ರಕರಣ ಸೇರಿ ರಾಜ್ಯದಲ್ಲಿ ನಡೆದಿರುವ ಜಿಹಾದಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಶಾಸಕ ಅರವಿಂದ್ ಬೆಲ್ಲದ್ ಆಗ್ರಹಿಸಿದರು.
 ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೇಹಾ ಹತ್ಯೆ ಮಾಡಿರುವುದನ್ನು ನೋಡಿದರೆ ಜಿಹಾದಿ ಮನಸ್ಥಿತಿ ಹೊಂದಿರುವರಿಂದಲೇ ಇದು ಸಾಧ್ಯ. ಹಿಂದು ಯುವತಿಯರ ಜತೆ ಫೋಟೊ ತೆಗೆಸಿಕೊಂಡು ಬ್ಲಾಕ್‌ಮೇಲ್ ಮಾಡುವುದು, ಮತಾಂತರ ಆಗುವಂತೆ ಹೆದರಿಸುವುದು, ಒಪ್ಪದೆ ಇದ್ದಾಗ ಕೊಲೆ ಮಾಡುವುದು ನಡೆಯುತ್ತಿದೆ ಎಂದು ಆರೋಪಿಸಿದರು.
 ನೇಹಾ ಹತ್ಯೆಯ ಪ್ರಕರಣವನ್ನು ಸಿಒಡಿಗೆ ಒಪ್ಪಿಸಿದ್ದು, ಅದರ ಮೇಲೆ ನಮಗೆ ನಂಬಿಕೆ ಇಲ್ಲ. ಸಿಬಿಐ ಸೇರಿ ವಿವಿಧ ಅತ್ಯುನ್ನತ ತನಿಖಾ ಸಂಸ್ಥೆಗಳಿಗೆ ನೀಡಲಿ ಎಂದು ಆಗ್ರಹಿಸಿದರು.
 ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್ ಎಂದು ಬರುವುದಿಲ್ಲ. ಇದು ಮಹಿಳೆಯರ ಮರ್ಯಾದೆ ಪ್ರಶ್ನೆ. ತನಿಖೆ ಏಕೆ ವಿಳಂಬ ಮಾಡಿಸಿದ್ದಾರೆ ಎಂದು ಜನರಿಗೆ ಉತ್ತರ ಕೊಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net