ಕ್ಷೇತ್ರದ ಅಭಿವೃದ್ಧಿಗೆ ಬೇಕು ಸಾಮಾಜಿಕ ಮೂಲಸೌಲಭ್ಯ

vinayakumar.jpg
Published on

ದಾವಣಗೆರೆ : ಕುಟುಂಬ ರಾಜಕಾರಣದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯದ ಹಿನ್ನೆಲೆ ಇಲ್ಲದೆ, ಯಾವುದೆ ಗಾಡ್‌ಫಾದರ್ ಸಹಾಯ ಪಡೆಯದೆ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ ಕುಮಾರ್ ಒಂಟಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಿ, ಶಿಕ್ಷಣ ಕ್ಷೇತ್ರದ ಅನುಭವದ ಬುತ್ತಿ ಹಿಡಿದು ರಾಜಕೀಯ ಪಯಣ ಆರಂಭಿಸಿದ್ದಾರೆ.
 ಎರಡು ರಾಷ್ಟ್ರೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿರುವಾಗಲೆ ವಿನಯ್ ತಮ್ಮದೇ ಆದ ಅಭಿಮಾನಿಗಳ ಪಡೆಯನ್ನು ಕಟ್ಟಿಕೊಂಡು ಮುನ್ನುಗ್ಗುತ್ತಿದ್ದಾರೆ. ಜನ ನನ್ನ ಜತೆಗಿದ್ದಾರೆ ಎನ್ನುವ ಆತ್ಮವಿಶ್ವಾಸದೊಂದಿಗೆ ಸ್ವಾಭಿಮಾನದ ಹೆಜ್ಜೆಗಳನ್ನಿಡುತ್ತ ಸಾಗಿದ್ದಾರೆ. ಹಳೇ ನೀರು ಹೋಗಿ ಹೊಸ ನೀರು ಬರಬೇಕು. ರಾಜಕಾರಣದಲ್ಲಿ ಹೊಸ ಮುಖಗಳು ಪ್ರಕಾಶಿಸಬೇಕು ಎನ್ನುವುದು ಅವರ ವಾದ.
 ಕಳೆದ ಒಂದು ವರ್ಷದಿಂದ ಕ್ಷೇತ್ರದ ತುಂಬ ಓಡಾಡಿ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ಹಳ್ಳಿಗಳ ಸ್ಥಿತಿಗತಿ ಕಂಡು ಮರುಗಿದ್ದಾರೆ. ಸಾಮಾಜಿಕ ಮೂಲಸೌಲಭ್ಯ, ಮಾನವ ಸಂಪನ್ಮೂಲ ಅಭಿವೃದ್ಧಿಯಂಥ ಆಶಯಗಳನ್ನಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ವಿಶೇಷವಾಗಿ ಯುವಜನರ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net