ಸ್ವಾತಂತ್ರ್ಯ ರಕ್ಷಣೆ ಎಲ್ಲರ ಹೊಣೆ

DVG-RASTROTTHANA-14.jpg
Published on

ದಾವಣಗೆರೆ : ಸ್ವಾತಂತ್ರಾೃ ನಂತರವೂ ಭಾರತಕ್ಕೆ ಗಂಡಾಂತರ ಎದುರಾಗಿದ್ದು, ಸ್ವಾತಂತ್ರೃವನ್ನು ರಕ್ಷಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹಿರಿಯ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಹೇಳಿದರು.  ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿವೇಕ ಸಭಾಂಗಣದಲ್ಲಿ ಚಂದ್ರಶೇಖರ್ ಆಜಾದ್ ಜೀವನ ಆಧಾರಿತ ಕಾದಂಬರಿ ‘ಅಜೇಯ’ದ ಸುವರ್ಣ ಸಂಭ್ರಮ, ವಾಸುದೇವ ಬಲವಂಥ ಪಡಕೆ ಜೀವನಾಧಾರಿತ ‘ಅದಮ್ಯ’ ಕಾದಂಬರಿ ನಲವತ್ತರ ಸಂಭ್ರಮದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.  ದೇಶದ ಲಕ್ಷಾಂತರ ರಾಜಕಾರಣಿಗಳು ದೇಶವನ್ನು ಸೋಲಿಸುವ ಪ್ರಯತ್ನದಲ್ಲಿದ್ದಾರೆ. ದೇಶಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ.ಇಂತಹವರನ್ನು ಮಟ್ಟ ಹಾಕಲು ಎಲ್ಲರೂ ಜಾಗೃತರಾಗಬೇಕಿದೆ ಎಂದು ತಿಳಿಸಿದರು.  ಅಹಿಂಸೆ, ಶಾಂತಿಯಿಂದ ದೇಶಕ್ಕೆ ಸ್ವಾತಂತ್ರೃ ಬಂದಿರುವುದಿಲ್ಲ. 2ನೇ ಮಹಾಯುದ್ಧದಲ್ಲಿ ಭಾರೀ ಪೆಟ್ಟು ತಿಂದಿದ್ದ ಬ್ರಿಟಿಷರು, ನೇತಾಜಿ ಸುಭಾಷ್‌ಚಂದ್ರ ಬೋಸರ ಆಜಾದ್ ಹಿಂದ್ ಫೌಜ್, ಮುಂಬೈ ನೌಕಾದಳದ ದಂಗೆ ಹಾಗೂ ಭಾರತೀಯರಲ್ಲಿ ಹೆಚ್ಚುತ್ತಿದ್ದ ಅಸಹನೆಯಿಂದ ದೇಶವನ್ನು ಬಿಟ್ಟು ಹೋಗಬೇಕಾಯಿತು ಎಂದರು.  ನಮ್ಮ ಪೂರ್ವಜರು ತಮ್ಮ ರಕ್ತ ತರ್ಪಣದಿಂದ ಸ್ವಾತಂತ್ರೃ ತಂದು ಕೊಟ್ಟಿದ್ದಾರೆ. ದೇಶ ಗಂಡಾಂತರ ಎರುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಸ್ವಾತಂತ್ರೃವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು.  ವೈಯಕ್ತಿಕ ಜೀವನದ ಜತೆಗೆ ದೇಶದ ಬಗ್ಗೆ ಚಿಂತನೆ ಮಾಡಬೇಕಾಗಿದೆ. ತಾಯಿ ಭಾರತಾಂಬೆಯ ಸೇವೆ ಮಾಡಿದಾಗ ಮಾತ್ರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.  ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕ ವಿಘ್ಞೇಶ್ವರ ಭಟ್ ಮಾತನಾಡಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಾರ್ಯದರ್ಶಿ ಎಚ್. ಜಯಣ್ಣ, ಬಳಗದ ಟಿಎಚ್‌ಎಂ ಜಯದೇವಯ್ಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಡಾ.ಎಸ್.ಆರ್‌ಹೆಗಡೆ, ವರ್ತಮಾನ ವೇದಿಕೆಯ ಎಂ.ಜಿ. ಪಂಚಾಕ್ಷರಿ, ಶಂಭುಲಿಂಗಪ್ಪ ಇತರರು ಇದ್ದರು. ರಾಷ್ಟ್ರೋತ್ಥಾನ ಬಳಗ ಹಾಗೂ ವರ್ತಮಾನ ವೇದಿಕೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net