ರಾತ್ರಿ 10.30ರ ನಂತರ ಹೋಟೆಲ್ ಬಂದ್ ! ಬಾಗಿಲು ತೆರೆದೀರಿ ಜೋಕೆ

DVG SP
Published on

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ರಾತ್ರಿ 10.30ರ ನಂತರ ಯಾವುದೇ ಹೋಟೆಲ್‌ಗಳು ತೆರೆಯುವಂತಿಲ್ಲ. ನಿಗದಿತ ಅವಧಿಗೆ ಮುಚ್ಚದಿದ್ದರೆ ಶಾಶ್ವತವಾಗಿ ಮುಚ್ಚಲು ಪೊಲೀಸ್ ಇಲಾಖೆ ಕ್ರಮ ವಹಿಸಲಿದೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಎಚ್ಚರಿಸಿದ್ದಾರೆ.

ಮಿಟ್ಲಕಟ್ಟೆ ಗ್ರಾಮದ ಬಳಿ ಹೋಟೆಲ್ ಒಂದರಲ್ಲಿ ಮಧ್ಯರಾತ್ರಿವರೆಗೆ ಪಾರ್ಟಿ ನಡೆಯುತ್ತಿದ್ದು, ಅನೇಕ ಬಾರಿ ಹೀಗೆ ಪಾರ್ಟಿ ನಡೆದಿವೆ ಎನ್ನಲಾಗಿದೆ. ಅಲ್ಲಿ ಮದ್ಯ ವಿತರಣೆಗೆ ಅವಕಾಶವಿಲ್ಲ. ಹೀಗಾಗಿ ಅಬಕಾರಿ ಇಲಾಖೆ ಗಮನಕ್ಕೆ ತರಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ಗ್ರಾಮದ ಇತರೆ 3-4 ಹೋಟೆಲ್‌ಗಳಲ್ಲೂ ಇದೇ ರೀತಿ ಪಾರ್ಟಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಇನ್ನು ಮುಂದೆ ಜಿಲ್ಲೆಯ ಯಾವುದೇ ಹೋಟೆಲ್‌ಗಳು ನಿಗಧಿತ ಅವಧಿಗೆ ಸೀಮಿತವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net