ಶತಕೋಟಿ ರಾಮ ತಾರಕ ಜಪ ಯಜ್ಞ ಆರಂಭ

yagna.jpg
Published on

ದಾವಣಗೆರೆ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯದಾದ್ಯಂತ ಶತಕೋಟಿ ರಾಮ ತಾರಕ ಜಪ ಯಜ್ಞವನ್ನು ಹಮ್ಮಿಕೊಂಡಿದ್ದು ಅದರಂತೆ ನಗರದ ಶ್ರೀ ಶಾರದಾಂಬ ದೇವಸ್ಥಾನದಲ್ಲೂ ಶಂಕರನಾರಾಯಣ ಶಾಸ್ತ್ರಿಗಳ ಸಮ್ಮುಖದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ ಮಂಗಳವಾರ ಚಾಲನೆ  ನೀಡಿದರು.
 ಶಂಕರ ಸೇವಾ ಸಂಘದ ಕಾರ್ಯದರ್ಶಿ ಶ್ರೀನಿವಾಸ ಜೋಶಿ, ಉಪಾಧ್ಯಕ್ಷರಾದ ಮೋತಿ ಸುಬ್ರಮಣ್ಯ, ವಿನಾಯಕ ಜೋಶಿ, ಎಸ್.ಪಿ. ಸತ್ಯನಾರಾಯಣ ರಾವ್, ಬಾಲಕೃಷ್ಣ ವೈದ್ಯ, ಡಾ. ಎಸ್.ಎನ್. ರಮೇಶ್, ಅನಿಲ್ ಬಾರಂಗಳ, ರಮೇಶ್ ಪಾಟೀಲ್, ಡಿ. ಶೇಷಾಚಲ ಇದ್ದರು.
 ಜಿಲ್ಲೆಯಾದ್ಯಂತ ಶತಕೋಟಿ ರಾಮ ತಾರಕ ಜಪವು ನಡೆಯಲಿದ್ದು ಪ್ರತಿದಿನ ತಾವು ಮಾಡಿದ ಜಪ ಸಂಖ್ಯೆಯನ್ನು ಬರೆದಿಟ್ಟುಕೊಂಡು ನಾವು ತಿಳಿಸಿದ ದಿನಾಂಕದಂದು ಒಟ್ಟು ಜಪ ಸಂಖ್ಯೆಯನ್ನು ಕೊಡಬೇಕು. ಅಯೋಧ್ಯೆಯಲ್ಲಿ 2024ರ ಜ. 24 ರಂದು ನಡೆಯಲಿರುವ ಶ್ರೀ ರಾಮಚಂದ್ರ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಈ ಜಪ ಸಂಖ್ಯೆಯನ್ನು ಕಳಿಸಿಕೊಡಲಾಗುವುದು. ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಜಪ ಯಜ್ಞದಲ್ಲಿ ಪಾಲ್ಗೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net