

ದಾವಣಗೆರೆ : ವಿದ್ಯಾಪೋಷಕ ಸಂಸ್ಥೆಯಿಂದ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ ಪ್ರತಿಭಾವಂತ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮವನ್ನು ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಡಾ. ಎಚ್.ಎನ್. ಮಲ್ಲಿಕಾರ್ಜುನಪ್ಪ, ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜ್, ಉದ್ಯಮಿಗಳಾದ ಕಿರಣ್ ಪಿ. ವಾಲಾವಾಲ್ಕರ್, ಶ್ರೀನಿವಾಸ್, ಗಣಪತಿ ಕಾಗಲ್‌ಕರ್, ಚಂದ್ರಶೇಖರ್ ಕರಿಯಪ್ಪನವರ್, ಬಿ.ಆರ್. ಚಿನ್ಮಯಿ, ನಿಂಗರಾಜ್ ಸುಳ್ಳಳ್ಳಿ ಮಾತನಾಡಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಅವರ ಭವಿಷ್ಯದ ಕುರಿತು ಹಿತ ನುಡಿಗಳನ್ನಾಡಿದರು. ಐ.ಎ.ಎಸ್, ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಕುರಿತು ಮಾಹಿತಿ ನೀಡಿದರು. ಟಿ. ಜಾಗೃತಿ ಪ್ರಾರ್ಥಿಸಿದರು. ಉಪನ್ಯಾಸಕ ಡಾ. ಸುಭಾಷ್ ಆರ್. ಶಿಂಧೆ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಪಿ. ಅಂಜಲಿ ಅನಿಸಿಕೆ ಹಂಚಿಕೊಂಡರು. ಎಸ್. ವಿಜೇತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಐ.ಕೆ. ಸಾಹಿತ್ಯ ವಂದಿಸಿದರು. ಶಿಕ್ಷಕ ಕೆ.ಸಿ. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 151 ವಿದ್ಯಾರ್ಥಿಗಳಿಗೆ 13.85 ಲಕ್ಷ ರೂ. ಧನ ಸಹಾಯ ಮಾಡಲಾಯಿತು.