ಸ್ತನ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ

DSC_0861.jpg
Published on

ದಾವಣಗೆರೆ : ಎಸ್ಎಸ್ ಕೇರ್ ಟ್ರಸ್ಟ್ ಹಾಗೂ ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ ಆಸ್ಪತ್ರೆ ವತಿಯಿಂದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶ ಕ್ಯಾನ್ಸರ್ ಸಂಬಂಧಪಟ್ಟಂತೆ ಉಚಿತ ತಪಾಸಣಾ ಶಿಬಿರವನ್ನು ಇತ್ತೀಚೆಗೆ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಸದ್ಯೋಜಾತ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಟ್ರಸ್ಟ್ ನ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಡಾ. ಅನುರೂಪಾ, ಡಾ. ನಿತಿನ್, ಸ್ನೇಹ ಮಹಿಳಾ ಬಳಗದ ಅಧ್ಯಕ್ಷೆ ಶೋಭಾ ರವಿ, ಗೌರವಾಧ್ಯಕ್ಷೆ ಮಂಜುಳಾ ಬಸವಲಿಂಗಪ್ಪ, ಮಂಜುಳಾ ನಿಂಗಪ್ಪ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net