ಆರೋಗ್ಯ ಪ್ರಯೋಗಾಲಯ ಸಾರ್ವಜನಿಕ ಸೇವೆಗೆ ಸಜ್ಜು

DVG-HEALTH.jpg
Published on

ದಾವಣಗೆರೆ: ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಭಾನುವಾರ ಜಿಲ್ಲಾ ಸಮಗ್ರ ಸಾರ್ವಜನಿಕರ ಆರೋಗ್ಯ ಪ್ರಯೋಗಾಲಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರು.
 ರಾಷ್ಟ್ರೀಯ ಆರೋಗ್ಯ ಅಭಿಯಾನದ ವತಿಯಿಂದ ಜಿಲ್ಲಾ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ನಿರ್ಮಾಣ ಮಾಡಲಾಗಿದ್ದು, ಜಿಲ್ಲಾ ವ್ಯಾಪ್ತಿಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ರಕ್ತ ಪರೀಕ್ಷೆ, ಎಚ್‌ಐವಿ ಏಡ್ಸ್, ಮೈಕ್ರೋ ಬಯಾಲಜಿ ಪರೀಕ್ಷೆ ಸೇರಿದಂತೆ ಇತರೆ ಎಲ್ಲ ರಕ್ತ ಪರೀಕ್ಷೆ ಸೇವೆ ನೀಡಲು ಸಿದ್ದವಾಗಿದೆ.
 ಡಾ. ಗಿರೀಶ್ ಸ್ವಾಗತಿಸಿದರು, ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ ವಂದಿಸಿದರು.
 ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ,ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ನಿವಾಸಿ ವೈದ್ಯಾಧಿಕಾರಿ ಡಾ.ಎಸ್. ನಾಗವೇಣಿ, ಕೇಂದ್ರ ವೀಕ್ಷಕ ಡಾ. ಸೋಮಶೇಖರ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net