

ದಾವಣಗೆರೆ : ಮಹಿಳೆಯರು ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಎಸ್.ಎಸ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ನಗರದ ಸದ್ಯೋಜಾತ ಹಿರೇಮಠದಲ್ಲಿ ಇತ್ತೀಚೆಗೆ ಎಸ್.ಎಸ್.ಕೇರ್ ಟ್ರಸ್ಟ್, ವಾಸವಿ ಯುವತಿಯರ ಸಂಘ, ಡಿಸಿಎಂ ಟೌನ್‌ಶಿಪ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನನ್ನ ನಡೆ- ಆರೋಗ್ಯದ ಕಡೆ’ ಎಂಬ ಮಹಿಳಾ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ಹೆಣ್ಣು ಮಕ್ಕಳು ಆರೋಗ್ಯದ ದೃಷ್ಟಿಯಿಂದ ದಿನದ ಅರ್ಧ ಗಂಟೆಯಾದರೂ ಯೋಗ-ಧ್ಯಾನ ಮಾಡಬೇಕು. ಉತ್ತಮ ಆಹಾರ ಸೇವಿಸಿ ಸ್ವಾಸ್ಥೃ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ಇಂತಹ ಕಾರ್ಯಕ್ರಮಗಳು ಮಹಿಳೆಯರ ಆರೋಗ್ಯಕ್ಕಾಗಿ ಸಹಾಯಕವಾಗಲಿದ್ದು, ಮಹಿಳೆಯರೆ ಆಯೋಜಿಸಿದ ಕಾರ್ಯಕ್ರಮದ ನಿರ್ವಹಣೆ ಶ್ಲಾಘಿಸಿದರು.
ಡಾ.ಅನುರೂಪಾ ಮಾತನಾಡಿ, ಮಹಿಳೆಯರು ಎದುರಿಸುವ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ತಡೆಯಲು ವ್ಯಾಕ್ಸಿನೇಷನ್ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು.
ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ವಿಮಲಾ ರಾಜೇಂದ್ರ, ನಿಕಟಪೂರ್ವ ಅಧ್ಯಕ್ಷೆ ಕೃಷ್ಣವೇಣಿ ಶೇಷಾದ್ರಿ, ಡಾ. ರಾಜೀವ್, ಪುಷ್ಪಾ, ಉಷಾ, ಶೋಭಾ, ಗಾಯತ್ರಿ, ಶಾಂತಾ ಇತರರು ಇದ್ದರು.