ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯಲಿ ಆರೋಗ್ಯ ಶಿಬಿರ

IMG-20230806-WA0034.jpg
Published on

ದಾವಣಗೆರೆ : ಇಲ್ಲಿನ ಸ್ವಾಮಿ ವಿವೇಕಾನಂದ ಬಡಾವಣೆಯ ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆಯಲ್ಲಿ ಸಿಸ್ಟರ್ ನಿವೇದಿತಾ ಮಹಿಳಾ ಸಮಾಜದ 29ನೇ ವರ್ಷದ ವಾರ್ಷಿಕ ಮಹೋತ್ಸವ ನಡೆಯಿತು.
ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಹಿಳಾ ಸಮಾಜದ ಮೂಲಕ ಜನಪರ ಕಾರ್ಯಕ್ರಮಗಳನ್ನು ನಡೆಸಲು ಸಲಹೆ ನೀಡಿದರು.
ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ನಡೆಸುವ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆಯಲು ತಿಳಿಸಿದರು.
ಈ ಸಂದರ್ಭದಲ್ಲಿ ಹುಲಿಕಟ್ಟೆ ಗ್ರಾಮದ ಮಹಿಳೆ ಒಬ್ಬರು ಎಸ್.ಎಸ್. ಕೇರ್ ಟ್ರಸ್ಟ್ ಆರೋಗ್ಯ ಶಿಬಿರಗಳನ್ನು ಗ್ರಾಮಾಂತರ ಭಾಗದಲ್ಲಿಯೂ ಮಾಡಿ ಎಂದು ಅವರ ಬಳಿ ಮನವಿ ಮಾಡಿದರು, ತಕ್ಷಣವೇ ಅವರ ಮನವಿಗೆ ಸ್ಪಂದಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಎಸ್.ಎಸ್ ಕೇರ್ ಟ್ರಸ್ಟ್ ಆರೋಗ್ಯ ಶಿಬಿರಗಳನ್ನು ಜಿಲ್ಲಾದ್ಯಂತ ನಡೆಸಲು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net