ಮೂವರು ಕೊಲೆ ಆರೋಪಿಗಳ ಬಂಧನ

Crime Logo
Published on

ದಾವಣಗೆರೆ: ಹರಿಹರ ತಾಲೂಕು ನಿಟ್ಟೂರು ಗ್ರಾಮದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಪತಿ ಬಸಪ್ಪ (38) ಮೃತಪಟ್ಟಿದ್ದು, ಸಾವಿನ ಬಗ್ಗೆ ಅನುಮಾನವಿದೆ ಎಂದು ಪತ್ನಿ ರೂಪಾ, ಜುಲೈ 14 ರಂದು ಮಲೇಬೆನ್ನೂರು ಠಾಣೆಗೆ ದೂರು ನೀಡಿದ್ದರು. ಅಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು.

ತನಿಖೆ ಮಾಡಿದಾಗ ಕೊಲೆಯ ವಿವರಗಳು ಬೆಳಕಿಗೆ ಬಂದಿವೆ. ಬಸಪ್ಪ ಎಂದಿನಂತೆ ಆ ದಿನವೂ ಮನೆಯಲ್ಲಿ ಜಗಳವಾಡಿದ್ದ. ಅದು ಅತಿರೇಕಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಆತನ ಮೇಲೆ ಹಲ್ಲೆ ನಡೆಸಿ, ನಂತರ ವೈರ್‌ನಿಂದ ಬಿಗಿದು ನೇಣು ಹಾಕಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಕತ್ತು ಹಿಸುಕಿದ್ದರಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ.

ಘಟನೆಗೆ ಸಂಬಂಧಿಸಿ ಆತನ ಪುತ್ರರಾದ ಅರುಣಕುಮಾರ, ಕಿರಣ್ ಹಾಗೂ ಅಳಿಯ ಕೋಟೆ ಮಲ್ಲೂರು ಗ್ರಾಮದ ಸಂತೋಷ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಪ್ರಕರಣದ ವಿಶೇಷ ತನಿಖೆಗೆ ಎಸ್ಪಿ ಹನುಮಂತರಾಯ ಆದೇಶಿಸಿದ್ದರು. ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಶಿವಪ್ರಸಾದ್, ಮಲೇಬೆನ್ನೂರು ಪಿಎಸ್‌ಐ ವೀರಬಸಪ್ಪ ಕುಸಲಾಪುರ, ಸಿಬ್ಬಂದಿ ಶಿವಕುಮಾರ್, ರಾಜಶೇಖರ್, ಬಸವರಾಜ್.ಟಿ, ಕಡೇಮನಿ ನಾಗಪ್ಪ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net