ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ 8ಕ್ಕೆ

HRR-SSK-NOV-05.jpg
Published on

ಹರಿಹರ: ನಗರದ ದೇವಸ್ಥಾನ ರಸ್ತೆ ಸಹಸ್ರಾರ್ಜುನ ವೃತ್ತದಲ್ಲಿ ನ. 8ರಂದು ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಾಲೂಕು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಹಂಗಾಮಿ ಅಧ್ಯಕ್ಷ ಮೋಹನ್ ಎನ್. ಖಿರೋಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ. 8ರಂದು ಬೆಳಗ್ಗೆ 8ಕ್ಕೆ ಶ್ರೀ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ, ಬೆಳಗ್ಗೆ 9ಕ್ಕೆ ಯಲ್ಲಮ್ಮ ತುಳಣಸಾ ಭೂತೆ ಸಮುದಾಯ ಭವನದ ಆವರಣದಲ್ಲಿ ಧ್ವಜಾರೋಹಣ, ಬೆಳಗ್ಗೆ 10ಕ್ಕೆ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದಿಂದ ಬೈಕ್ ರ‌್ಯಾಲಿ, ಮಧ್ಯಾಹ್ನ 12ಕ್ಕೆ ತಾಲೂಕು ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಣೆ, ಸಂಜೆ 4ಕ್ಕೆ ಶ್ರೀ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ.  ಸಂಜೆ 7ಕ್ಕೆ ಸಮಾಜದ ಅಧ್ಯಕ್ಷರಾಗಿದ್ದ ದಿ. ನಾಗರಾಜ್ ಮೆಹರ್ವಾಡೆ (ನಲ್ಲಿ) ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷರು, ಎಬಿಎಸ್‌ಎಸ್‌ಕೆ ಕಾರ್ಯದರ್ಶಿ ಹಾಗೂ ತಪೋವನ ಆಸ್ಪತ್ರೆ ಮುಖ್ಯಸ್ಥ ಶಶಿಕುಮಾರ್ ವಿ. ಮೆಹರ‌್ವಾಡೆ ಉದ್ಘಾಟಿಸುವರು.  ಸಂಸದ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್, ಮುಖಂಡರಾದ ಚಂದ್ರಶೇಖರ್ ಪೂಜಾರ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ನಗರದ ಉದ್ಯಮಿ ಕೃಷ್ಣಸಾ ಭೂತೆ, ಹುಬ್ಬಳ್ಳಿ ನಗರದ ಉದ್ಯಮಿಗಳಾದ ಅರ್ಜುನ್ ಪವಾರ್, ವಿನಯ್ ಕೆ. ಪವಾರ್, ಕನ್ನಡ ಸಂಸ್ಕೃತಿ ಇಲಾಖೆಯ ರವಿಚಂದ್ರ, ಕಾಂಗ್ರೆಸ್ ಯುವ ಮುಖಂಡ ನಿಖಿಲ್ ಕೊಂಡಜ್ಜಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಪರಶುರಾಮ್ ಕಾಟ್ವೆ, ಖಜಾಂಚಿ ತುಳಜಪ್ಪ ಭೂತೆ, ನಿರ್ದೇಶಕರಾದ ವಿನಯ್ ಲದ್ವಾ, ಅಶೋಕ್ ಭೂತೆ, ಗಣೇಶ್ ಮೆಹರ್ವಾಡೆ, ಶ್ರೀಕಾಂತ್ ಮೆಹರ್ವಾಡೆ, ಮುಖಂಡ ಕೃಷ್ಣಸಾ ಪಿ. ರಾಜೋಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net