ವರ್ಷಕ್ಕೆ ಎರಡು ಶಿಬಿರ, ಸಲಕರಣೆ ವಿತರಣೆ

dvg-handicap_20250923004554294.jpg
Published on

ದಾವಣಗೆರೆ :  ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಜನವರಿ ಮತ್ತು ಡಿಸೆಂಬರ್ ತಿಂಗಳಲ್ಲಿ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ತಪಾಸಣಾ ಶಿಬಿರ ನಡೆಸಿ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ನಗರದ ಸದ್ಯೋಜಾತ ಶಿವಾಚಾರ್ಯ ಮಠದಲ್ಲಿ ಸೋಮವಾರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜನ್ಮದಿನದ ಅಂಗವಾಗಿ ಹಿರಿಯ ನಾಗರಿಕರು, ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.  ತಪಾಸಣಾ ಶಿಬಿರಗಳ ನಂತರ ಕೆಲ ದಿನಗಳಲ್ಲಿ ಉಪಕರಣ ನೀಡಲಾಗುವುದು. ಕ್ಷೇತ್ರದ ಜನರು ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.  ಸದ್ಯಕ್ಕೆ ದಾವಣಗೆರೆ ದಕ್ಷಿಣ, ಉತ್ತರ, ಮಾಯಕೊಂಡ ಕ್ಷೇತ್ರದ ಫಲಾನುಭವಿಗಳಿಗೆ ಕಾರ್ಯಕ್ರಮ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇತರ ತಾಲೂಕಿನವರಿಗೂ ಸೌಲಭ್ಯ ವಿಸ್ತರಿಸಲಾಗುವುದು ಎಂದರು.  ಈ ಬಾರಿ 1200 ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಿ 232 ಅಂಗವಿಕಲರು, 101 ಹಿರಿಯ ನಾಗರಿಕರಿಗೆ ಒಟ್ಟು 28.82 ಲಕ್ಷ ವೆಚ್ಚದಲ್ಲಿ ಉಪಕರಣ ವಿತರಿಸಲಾಗುತ್ತಿದೆ ಎಂದು ಹೇಳಿದರು.  ಸಾಮಾನ್ಯವಾಗಿ ಅಲಿಂಕೋ ಸಂಸ್ಥೆಯವರು ಸಾಧನ ಸಲಕರಣೆಗಳನ್ನು ಒದಗಿಸಲು ಒಂದೂವರೆ ತಿಂಗಳು ಹಿಡಿಯುತ್ತದೆ. ಆದರೆ ನಮ್ಮ ವಿಶೇಷ ಪ್ರಯತ್ನದ ಫಲವಾಗಿ 3 ಟ್ರಕ್‌ನಷ್ಟು ಉಪಕರಣಗಳು ಬೇಗನೆ ಬಂದಿವೆ ಎಂದು ತಿಳಿಸಿದರು.  ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಡಾ. ಕೆ.ಕೆ. ಪ್ರಕಾಶ್, ಅಲಿಂಕೋ ಸಂಸ್ಥೆಯ ಅಧಿಕಾರಿಗಳು ಇದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net