ಜಿಲ್ಲೆಯಿಂದ 216 ಜನ ಹಜ್ ಯಾತ್ರೆಗೆ ಪ್ರಯಾಣ

IMG-20240502-WA0196.jpg
Published on

ದಾವಣಗೆರೆ : ಈ ಬಾರಿ ಪವಿತ್ರ ಹಜ್ ಯಾತ್ರೆಗೆ ಜಿಲ್ಲೆಯಿಂದ 216 ಜನ ಪ್ರಯಾಣ ಬೆಳೆಸಲಿದ್ದಾರೆ.
 ಇಲ್ಲಿನ ಕೆ.ಆರ್. ರಸ್ತೆಯಲ್ಲಿರುವ ಗುಲ್ಷನ್ ಶಾದಿಮಹಲ್ನಲ್ಲಿ ಬುಧವಾರ ಖಾದಿ ಮುಲ್ ಹುಜ್ಜಾಜ್ ಸಮಿತಿ ಆಶ್ರಯದಲ್ಲಿ ಹಜ್ ಯಾತ್ರಿಕರಿಗೆ ತರಬೇತಿ ಶಿಬಿರ ಹಾಗೂ ಚುಚ್ಚುಮದ್ದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪಾಲೊಂಡು ಶುಭ ಹಾರೈಸಿದರು. ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್, ಜಿಲ್ಲಾ ಹಜ್ ಸಮಿತಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕಾರ್ಯದರ್ಶಿ ಟಿ.ಎಸ್. ರಹಮತ್‌ಉಲ್ಲಾ, ರಾಜ್ಯ ಹಜ್ ಕಮಿಟಿ ಸದಸ್ಯ ಸೈಯಿದ್ ಚಾರ್ಲಿ, ಪಾಲಿಕೆ ಸದಸ್ಯ ಎ.ಬಿ. ರಹೀಮ್, ಎನ್.ಕೆ. ಇಸ್ಮಾಯಿಲ್, ಚಾರ್ಲಿ ಎಜುಕೇಷನ್ ಫೌಂಡೇಶನ್‌ನ ವಸೀಮ್ ಚಾರ್ಲಿ, ಸೈಯದ್ ಹಸೀಬ್ ಹಬೀಬ್ ಇದ್ದರು.
 ಉಲೇಮಾಗಳಿಂದ ತರಬೇತಿ ನೀಡಲಾಯಿತು. ಯಾತ್ರಿಗಳಾದ ಅತಾವುಲ್ಲಾ ಹಕಾನಿ, ಮಹಮ್ಮದ್ ಜುಬೇರ್ ಮಾತನಾಡಿ ಸರ್ಕಾರದ ಅಡಿಯಲ್ಲಿ ನಮಗೆ ಲಾಟರಿ ಮೂಲಕ ಆಯ್ಕೆ ನಡೆದು ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ, ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net