30 ರಂದು ಜಿಲ್ಲಾದ್ಯಂತ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

dvg-Vasanti-Uppar.jpg
Published on

ದಾವಣಗೆರೆ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮೀ’ ಯೋಜನೆಗೆ ಆ. 30 ರಂದು ಬೆಳಗ್ಗೆ 11 ಗಂಟೆಗೆ ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದಲ್ಲಿ ಚಾಲನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
 ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಏಕ ಕಾಲಕ್ಕೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ, ನಗರದ 11 ವಿವಿಧ ಸ್ಥಳಗಳಲ್ಲಿ ಹಾಗೂ ಜಗಳೂರು, ಹರಿಹರ, ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ನಗರ ಪ್ರದೇಶಗಳ ವಾರ್ಡ್‌ಗಳಲ್ಲಿ  ಕಾರ್ಯಕ್ರಮ ಆಯೋಜಿಸಲಾಗಿದೆ.
 ಜಿಲ್ಲೆಯಲ್ಲಿ ಇಲ್ಲಿಯವರೆಗೆ 3,27,870 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ (ಶೇ. 87.93). ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಮಾಡಿಸಿದ ಕುಟುಂಬದ ಯಜಮಾನಿಗೆ 2 ಸಾವಿರ ರೂ.ಗಳನ್ನು ನೇರವಾಗಿ ಡಿಬಿಟಿ ಮೂಲಕ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
 ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಸೋಮವಾರದ ವರೆಗೆ ಗ್ರಾಮೀಣ ಪ್ರದೇಶಗಳಿಂದ 2.32 ಲಕ್ಷ, ನಗರ ಪ್ರದೇಶಗಳಲ್ಲಿ 95,024 ಸೇರಿ ಒಟ್ಟು 3.27 ಲಕ್ಷ ಅರ್ಜಿಗಳು ಸ್ವೀಕೃತವಾಗಿವೆ (ಶೇ. 85.21). ಒಟ್ಟು 56847 ಅರ್ಜಿಗಳು ಬಾಕಿ ಇವೆ (ಶೇ. 14.79).
 ...
 * ನಗರದಲ್ಲಿ ಎಲ್ಲೆಲ್ಲಿ?
 ಮಹಾನಗರ ಪಾಲಿಕೆ ಕಚೇರಿ, ಪಿ.ಬಿ ರಸ್ತೆ (ವಾರ್ಡ್ ನಂ.25, 17), ಮಹಾನಗರ ಪಾಲಿಕೆ ಕಚೇರಿ 3ನೇ ವಿಭಾಗ (ವಾರ್ಡ್ ನಂ.25), ನೂರಾನಿ ಶಾದಿ ಮಹಲ್, ಇಮಾಂ ನಗರ (ವಾರ್ಡ್ ನಂ. 11), ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂದಿರ, ಗಡಿಯಾರ ಕಂಬದ ಹತ್ತಿರ (ವಾರ್ಡ್ ನಂ. 18), ಮಲ್ಲಿಕಾರ್ಜುನ ಸಮುದಾಯ ಭವನ, ಆರ್.ಎಂ.ಸಿ. ರಸ್ತೆ, ಬಂಬೂ ಬಜಾರ್ (ವಾರ್ಡ್ ನಂ. 20, 21), ಗೋಲ್ಡನ್ ಪ್ಯಾಲೇಸ್ ಬೂದಾಳ್ ರೋಡ್, ರಿಂಗ್ ರಸ್ತೆ, (ವಾರ್ಡ್ ನಂ. 5), ಯಲ್ಲಮ್ಮ ದೇವಿ ಸಮುದಾಯ ಭವನ, ಜಾಲಿನಗರ (ವಾರ್ಡ್ ನಂ.7), ಚಿದಂಬರ ದೇವಸ್ಥಾನ ಸಮುದಾಯ ಭವನ, ನಿಟ್ಟುವಳ್ಳಿ ವಾರ್ಡ್ ನಂ.29), ಅಂಬೇಡ್ಕರ್ ಸಮುದಾಯ ಭವನ, ಗಾಂಧಿ ನಗರ (ವಾರ್ಡ್ ನಂ.1).
 ಈ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಫಲಾನುಭವಿಗಳು ಸಮೀಪದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net