ಬೆಳೆ ವಿಮೆ ಪಾವತಿಗೆ ಅವಧಿ ವಿಸ್ತರಣೆ

BELEVIME
Published on

ದಾವಣಗೆರೆ: 2020-21ನೇ ಸಾಲಿನ ಮುಂಗಾರು ಹಂಗಾಮಿಗೆ ತೋಟಗಾರಿಕೆ ಬೆಳೆಗಳನ್ನು ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ದಾವಣಗೆರೆ ತಾಲೂಕಿನ ರೈತರು ಅಡಿಕೆ, ವೀಳ್ಯೆದೆಲೆ (ಕೊಯ್ಲು ಹಂತದ) ಮತ್ತು ದಾಳಿಂಬೆ ಬೆಳೆಗೆ ನೋಂದಣಿಗಿದ್ದ ಅವಧಿಯನ್ನು ಇಲಾಖೆಯ ನಿರ್ದೇಶನಾಲಯದ ಪರಿಷ್ಕೃತ ಆದೇಶದಂತೆ ಜುಲೈ 10 ರವರೆಗೆ ವಿಸ್ತರಿಸಲಾಗಿದೆ.

ತಾಲೂಕಿನ ರೈತರು ತಮ್ಮ ಹತ್ತಿರದ ಬ್ಯಾಂಕ್ ಹಾಗೂ ಸೇವಾ ಕೇಂದ್ರಗಳಲ್ಲಿ ತಮ್ಮ ವಿಮಾ ಯೋಜನೆಯ ಹಣ ಪಾವತಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net