

ನ್ಯಾಮತಿ : ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಸಂಭ್ರಮದಿಂದ ಕಾರ್ತಿಕೋತ್ಸವ ನಡೆಯಿತು. ಉತ್ಸವ ಪ್ರಯುಕ್ತ ಹೂ ಹಾಗೂ ವಿದ್ಯುತ್ ದೀಪಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಆಂಜನೇಯಸ್ವಾಮಿ ಶೀಲಾಮೂರ್ತಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ, ಮಹಾ ಮಂಗಳಾರತಿಯನ್ನು ಶ್ರೀ ಜಯಲಿಂಗ ಸ್ವಾಮೀಜಿ ನೆರವೇರಿಸಿದರು. ಭಕ್ತರು ಮನೆಯಿಂದ ಎಣ್ಣೆ, ಬತ್ತಿಗಳನ್ನು ತಂದು ದೀಪಗಳನ್ನು ಬೆಳಗಿಸಿದರು.