ಆಷಾಢ ಏಕಾದಶಿ ಪೂಜೆ, ಪಲ್ಲಕ್ಕಿ ಉತ್ಸವ

DVG-BHAVASARA-17.jpg
Published on

ದಾವಣಗೆರೆ : ನಗರದ ಮಹಾರಾಜಪೇಟೆಯ ಶ್ರೀ ಭಾವಸಾರ ಕ್ಷತ್ರೀಯ ಭಜನಾ ಮಂಡಳಿಯಿಂದ ಆಷಾಢ ಪಂಡರಾಪುರ ವಾರಿ ಬ್ರಹ್ಮರಥೋತ್ಸವದ ಪ್ರಯುಕ್ತ ಬುಧವಾರ ಸ್ವಾಮಿಗೆ ಅಭಿಷೇಕ, ಕಾಕಡಾರತಿ, ಭಜನೆ ಮತ್ತು ಪಲ್ಲಕ್ಕಿ ಉತ್ಸವ ನೆರವೇರಿತು.  ಭಜನಾ ಮಂಡಳಿ, ದೈವ ಮಂಡಳಿ, ಮಹಿಳಾ ಮಂಡಳಿ, ತರುಣ ಮಂಡಳಿಯ ಇತರೆ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಜ್ಞಾನೇಶ್ವರಿ (ಭಗವದ್ಗೀತೆ) ಪಾರಾಯಣ, ಹರಿಪಾಠ ಮತ್ತು ಕಲಾವತಿ ಮಹಿಳಾ ಮಂಡಳಿಯಿಂದ ಭಜನೆ ಹಾಗೂ ರಾತ್ರಿ ಹ.ಭ.ಪ. ರಾಮಕೃಷ್ಣರಾವ್ ನವಲೆ ಅವರಿಂದ ಕೀರ್ತನೆ ಮತ್ತು ಅಖಂಡ ಜಾಗರಣೆ ನಡೆಯಿತು.  ಭಜನಾ ಮಂಡಳಿ ಅಧ್ಯಕ್ಷ  ನಿಂಗಸ್ವಾಮಿರಾವ್ ಖಮಿತ್ಕರ್, ಚಂದ್ರಕಾಂತ್ ವಾದೋನೆ ಮತ್ತು ವಿನಯ್ ಜಿಂಗಾಡೆ, ವಿನಾಯಕ್ ಟಿಕಾರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net