ಗಾರ್ನಿಯರ್ ಪ್ರಚಾರ ಕ್ಯಾಂಪೇನ್‌ಗೆ ಚಾಲನೆ

garnier.jpg
Published on

ದಾವಣಗೆರೆ : ರಾಜ್ಯದ ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಹೇರ್ ಕಲರ್ ಕಂಪನಿಯಿಂದ ಗಾರ್ನಿಯರ್ ಪ್ರಚಾರದ ಕ್ಯಾಂಪೇನ್‌ಗೆ ನಗರದ ಚನ್ನಗಿರಿ ಕೇಶವಮೂರ್ತಿ ರೋಟರಿ ಸಭಾಂಗಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
 ರೋಟರಿ ಕ್ಲಬ್ ಸಹಕಾರದಲ್ಲಿ ಆಯೋಜಿಸಿದ್ದ ಕ್ಯಾಂಪೇನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ದಾವಣಗೆರೆ ಅಧ್ಯಕ್ಷೆ ಕುಸುಮಾ ವಿಜಯಾನಂದ ಮಾತನಾಡಿ, ವಿಜಯವಾಣಿ ಪತ್ರಿಕೆ ಹಲವು ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುತ್ತ ಬಂದಿದೆ. ವಿಶ್ವ ಆರೋಗ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಾಕಥಾನ್‌ನಲ್ಲಿ 5 ಸಾವಿರ ಜನರು ಪಾಲ್ಗೊಂಡಿದ್ದನ್ನು ಪ್ರಸ್ತಾಪಿಸಿದರು.
 ಮುಂಬರುವ ದಿನಗಳಲ್ಲಿ ವಿಜಯವಾಣಿ ಪತ್ರಿಕೆಯೊಂದಿಗೆ ಜಂಟಿಯಾಗಿ ಕೆಲಸ ಮಾಡಲು ತಮ್ಮ ಸಂಸ್ಥೆ ಸಿದ್ಧವಿದೆ. ಗಾರ್ನಿಯರ್‌ನಂಥ ಪ್ರತಿಷ್ಠಿತ ಕಂಪನಿಯವರು ಉಚಿತವಾಗಿ ಹೇರ್ ಕಲರ್ ಮಾಡುವುದು ವಿಶೇಷವಾಗಿದೆ. 15 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
 ರೋಟರಿ ಕ್ಲಬ್ ದಾವಣಗೆರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ನಿರ್ದೇಶಕ ಆರ್.ಟಿ. ಮೃತ್ಯುಂಜಯ ಮಾತನಾಡಿ, ಸೆಲೂನ್‌ಗೆ ಹೋಗಿ ಹೇರ್ ಕಲರ್ ಮಾಡಿಸಿಕೊಳ್ಳಲು ಎಲ್ಲರಿಗೂ ಆರ್ಥಿಕ ಅನುಕೂಲತೆ ಇರುವುದಿಲ್ಲ. ಇಲ್ಲಿ ಉಚಿತವಾಗಿ ಆಯೋಜನೆ ಮಾಡಲಾಗಿದ್ದು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
 ವಿಜಯವಾಣಿ ಸಾರ್ವಜನಿಕರಿಗೆ ಉಪಯುಕ್ತವಾಗಿವ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ. ಈ ಹಿಂದೆ ನಮ್ಮ ಸಂಸ್ಥೆಯ ಸಹಕಾರದೊಂದಿಗೆ ಆರೋಗ್ಯವಂತ ಮಗು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸ್ಮರಿಸಿದರು.
 ರೋಟರಿ ಕ್ಲಬ್ ಕಾರ್ಯದರ್ಶಿ ಸುನೀತಾ ಮೃತ್ಯುಂಜಯ ಮಾತನಾಡಿ, ವಿಜಯವಾಣಿ ನಡೆಸುತ್ತಿರುವ ಸಾಮಾಜಿಕ ಚಟುವಟಿಕೆಗಳಲ್ಲಿ ತಾವೂ ಕೈಜೋಡಿಸುವುದಾಗಿ ಹೇಳಿದರು.
 ಗಾರ್ನಿಯರ್ ಕಂಪನಿಯ ಸೂಪರ್‌ವೈಸರ್ ಶೋಭಿತ್ ವರ್ಮಾ, ವಿಜಯವಾಣಿ ಚಿತ್ರದುರ್ಗ ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್, ದಾವಣಗೆರೆ ಕಚೇರಿಯ ಜಾಹೀರಾತು ವಿಭಾಗದ ಸೀನಿಯರ್ ಆಫೀಸರ್ ಸಿ.ಬಿ. ಶಶಿಧರಮೂರ್ತಿ, ಪ್ರಸರಣ ವಿಭಾಗದ ಸಂತೋಷ್ ಕಲ್ಮಠ, ವಿಶೇಷ ವರದಿಗಾರ ರಮೇಶ ಜಹಗೀರದಾರ್ ಇದ್ದರು.
 ...
 * ಬಗೆ ಬಗೆಯ ಬಣ್ಣಗಳು
 ಈ ಕ್ಯಾಂಪೇನ್ ಉಚಿತವಾಗಿದ್ದು ಹೇರ್ ಕಲರ್ ಮಾಡಿಸಿಕೊಳ್ಳಲು ಬರುವವರ ಹೆಸರನ್ನು ಮೊದಲು ನೋಂದಣಿ ಮಾಡಿಕೊಳ್ಳಲಾಗುವುದು (ಮೊಬೈಲ್ ಒಟಿಪಿ ಸಹಿತ). ನಂತರ ಅವರಿಗೆ ಆಸಕ್ತಿ ಇರುವ ಬಣ್ಣವನ್ನೆ ಉಪಯೋಗಿಸಲಾಗುವುದು ಎಂದು ಗಾರ್ನಿಯರ್ ಕಂಪನಿಯ ಸೂಪರ್‌ವೈಸರ್ ಶೋಭಿತ್ ವರ್ಮಾ ತಿಳಿಸಿದರು.
 ನ್ಯಾಚುರಲ್ ಬ್ಲಾೃಕ್, ಡಾರ್ಕೆಸ್ಟ್ ಬ್ರೌನ್, ಬರ್ಗುಂಡಿ, ಬ್ರೌನ್, ವೈನ್ ಬರ್ಗುಂಡಿ ಸೇರಿ 7 ಬಣ್ಣಗಳ ಆಯ್ಕೆಯಿದೆ. ಇದರಲ್ಲಿ ಅಮೋನಿಯಾ ಅಂಶ ಇರುವುದಿಲ್ಲ. 15 ರಿಂದ 20 ನಿಮಿಷಗಳಲ್ಲಿ ಹೇರ್ ಕಲರ್ ಮಾಡಲಾಗುವುದು. ನಂತರ ವಾಶ್ ಸೌಲಭ್ಯವೂ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net